ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ…

235
firstsuddi

ಬೆಂಗಳೂರು : ಇಂದು ನಡೆದ ಮೊದಲ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ನನ್ನ ಮೇಲೆ ವಿಶ್ವಾಸ ಇದ್ದರೆ ಮಾತ್ರ ನಾನು ಈ ಸ್ಥಾನದಲ್ಲಿ ಕೂರುತ್ತೇನೆ. ಇಲ್ಲವಾದರೆ ನಾನು ಈ ಹುದ್ದೆಯನ್ನು ದುರುಪಯೋಗಪಡಿಸದೇ ಈ ಸ್ಥಾನದಿಂದ ಕೆಳಗಿಳಿಯಲು ಸಿದ್ದನಿದ್ದೇನೆ. ಕೆಲವು ಶಾಸಕರ ನಿರ್ಣಯಗಳಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ ನಾನು ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿದ್ದೇನೆ. ಇದಕ್ಕಾಗಿ ನನಗೆ ಕಾಲಾವಕಾಶ ಕೊಡಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದು, ಈ ಕುರಿತು ಸ್ಪೀಕರ್ ರಮೇಶ್ ಕುಮಾರ್ ಅವರು ಸಮಯ ನಿಗದಿಪಡಿಸಲಿದ್ದಾರೆ. ಇನ್ನೂ 7 ದಿನಗಳ ಕಾಲ ಸಮಯ ನಿಗಧಿಪಡಿಸಲು ಕಾಲಾವಕಾಶವಿದ್ದು, ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡುವುದಾಗಿ ತಿಳಿಸಿ ಪ್ರತಿಪಕ್ಷದವರಿಗೆ ಶಾಕ್ ನೀಡಿದ್ದಾರೆ.