ಶೀಘ್ರದಲ್ಲಿ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಮಂಡಳಿ ವಿಲೀನ : ಸಚಿವ ಸುರೇಶ್ ಕುಮಾರ್.

140
firstsuddi

ಬೆಂಗಳೂರು : ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಂಬುವುದಾಗಿ ಎರಡು ಪ್ರತ್ಯೇಕವಾಗಿದೆ. ಇಂತಹ ಪಿಯು, ಎಸ್‍ಎಸ್‍ಎಲ್‍ಸಿ ಮಂಡಳಿಗಳನ್ನು ಜೊತೆಗೂಡಿಸಿ ಒಂದೇ ಮಂಡಳಿಯನ್ನಾಗಿ ಮಾಡಲಾಗುತ್ತಿದೆ. ಈ ವಿಲೀನ ಆದಂತಹ ಎರಡು ಮಂಡಳಿಗಳನ್ನು ಪ್ರಾಥಮಿಕ ಶಿಕ್ಷಣ ಪರಿಷತ್ ಎಂದು ನಾಮಕರಣ ಮಾಡಲಾಗುತ್ತದೆ ಎಂಬುವುದಾಗಿ ಸಚಿವ ಸುರೇಶ್ ಕುಮಾರ್ ಅವರು ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳಲು ಪ್ರೌಢ ಶಿಕ್ಷಣ ಮಂಡಳಿ ಇದೆ. ಪಿಯುಸಿ ಶೈಕ್ಷಣಿಕ ಚಟುವಟಿಕೆ ನೋಡಿಕೊಳ್ಳುವುದಕ್ಕಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಇದೆ. ಇಂತಹ ಎರಡು ಮಂಡಳಿಗಳನ್ನು ಒಂದೇ ಮಾಡುವಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಪಿಯುಸಿ ಮತ್ತು ಎಸ್‍ಎಸ್‍ಎಲ್‍ಸಿ ಮಂಡಳಿಗಳನ್ನು ಒಂದೇ ಮಾಡಿ ವಿಲೀನಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಎರಡು ಮಂಡಳಿಗಳನ್ನು ವಿಲೀನಗೊಳಿಸಿ ಪ್ರಾಥಮಿಕ ಶಿಕ್ಷಣ ಪರಿಷತ್ ಎಂಬುವುದಾಗಿ ಮರು ನಾಮಕರಣ ಮಾಡಲಿರುವುದಾಗಿ ತಿಳಿಸಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಪಿಯುಸಿ, ಹಾಗೂ ಎಸ್‍ಎಸ್‍ಎಲ್‍ಸಿ ಮಂಡಳಿಗಳು ವಿಲೀನಗೊಂಡು ಪ್ರಾಥಮಿಕ ಶಿಕ್ಷಣ ಪರಿಷತ್ ಅಸ್ಥಿತ್ವಕ್ಕೆ ಬರಲಿದೆ.