ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಸಚಿವರ ಹೆಸರಲ್ಲಿ ಐದು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ.
ನಕಲಿ ಫೇಸ್ ಬುಕ್ ಖಾತೆ ತೆರೆದು ಸುಮಾರು 5 ಸಾವಿರ ಹಣ ನೀಡುವಂತೆ ಕೇಳಿದ ನಕಲಿ ಖಾತೆದಾರರು ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಲು ಮನವಿ ಮಾಡಿದರು. ಅಲ್ಲದೇ ನೀಡಿದ ಹಣವನ್ನು ಸಂಜೆಯೊಳಗೆ ವಾಪಸ್ಸು ನೀಡುವುದಾಗಿ ಹೇಳಿದರು. ಈ ವಿಚಾರ ತಿಳಿದ ಸಚಿವರ ಆಪ್ತ ಕಾರ್ಯದರ್ಶಿ ಪಿ.ಎಂ ಚಿದಂಬರ ಸಿಐಡಿಗೆ ದೂರು ನೀಡಿದ್ದಾರೆ.










