ಮೂಡಿಗೆರೆ: ನಾನಾ ಕಾರಣದಿಂದಾಗಿ ಬಡ ಜನರು ಜೀವನದಲ್ಲಿ ವಿವಿಧ ರೀತಿಯ ತೊಂದರೆ ಅನುಭವಿಸುತ್ತಿರುತ್ತಾರೆ. ಅವರಿಗೆ ಸರಕಾರದ ಸವಲತ್ತು ಪ್ರಾಮಾಣಿಕವಾಗಿ ದೊರೆತಾಗ ಜೀವನದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ ಎಂದು ಜಿ.ಪಂ. ಸದಸ್ಯೆ ಅಮಿತಾ ಮುತ್ತಪ್ಪ ಹೇಳಿದರು.
ತಾಲೂಕಿನ ಹಂತೂರು ಗ್ರಾ.ಪಂ. ಕಚೇರಿ ಆವರಣದಲ್ಲಿ ಅಂಗವಿಲರ ಕಲ್ಯಾಣ ಯೋಜನೆಯಡಿಯಲ್ಲಿ ತ್ರಿಚಕ್ರ ವಾಹನವನ್ನು ಫಲಾನುಭವಿ ಹರೀಶ್ ದೇವಾಡಿಗ ಅವರಿಗೆ ವಿತರಿಸಿ ಅವರು ಮಾತನಾಡಿದರು. ಬಡವರಿಗೆ ಸರಕಾರದ ಯೋಜನೆ ಬಗ್ಗೆ ಅರಿವಿರುವುದಿಲ್ಲ. ಅಂತವರಿಗೆ ಸರಕಾರದ ಯೋಜನೆ ಬಗ್ಗೆ ಅರಿವು ಮೂಡಿಸಿ ಅರ್ಹರಿಗೆ ಸವಲತ್ತು ಸಿಗುಂವಂತೆ ಮಾಡುವುದು ಎಲ್ಲಾ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಸರಕಾರದ ಯಾವುದೇ ಸವಲತ್ತು ಪಡೆಯುವ ಫಲಾನುಭವಿಗಳು ಅದನ್ನು ದುರುಪಯೋಗಪಡಿಸಿಕೊಳ್ಳದೇ ತಮ್ಮ ಜೀವನಕ್ಕೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕೆಂದು ಮನವಿ ಮಾಡಿದರು.
ಮಾಜಿ ಗ್ರಾ.ಪಂ.ಸದಸ್ಯ ವಿನೋಧದ ಕಣಚೂರು, ಗೋಣಿಬೀಡು ಹೋಬಳಿ ಬಿಜೆಪಿ ಅಧ್ಯಕ್ಷ ಭರತ್ ಕನ್ನೇಹಳ್ಳಿ, ಪ್ರಧಾನ ಕಾರ್ಯದರ್ಶಿ ಮೋಹನ್ ಜಾಣಿಗೆ, ಮುಖಂಡರಾದ ಆದರ್ಶ, ಮಂಜುನಾಥ್‍ಗೌಡ, ಉಪೇಂದ್ರಗೌಡ, ನಿರ್ಮಲಾ, ಶಾರದ, ಪಂಚಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು ಮತ್ತಿತರರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಸರಕಾರದ ಸವಲತ್ತು ಅರ್ಹರಿಗೆ ಪ್ರಾಮಾಣಿಕವಾಗಿ ದೊರೆತಾಗ ಜೀವನದಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತದೆ :...










