ಸರಿಗಮಪ ಸೀಸನ್ 19ರ ವಿನ್ನರ್ ಪ್ರಗತಿ ಬಡಿಗೇರ್‌ಗೆ ಸಿಕ್ಕ ಬಹುಮಾನ ಎಷ್ಟು?

73
firstsuddi

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಸರಿಗಮಪ ಸೀಸನ್ 19 ವಿನ್ನರ್ ಆಗಿ ಪ್ರಗತಿ ಬಡಿಗೇರ್ ಹೊರಹೊಮ್ಮಿದ್ದಾರೆ.

ಸರಿಗಮಪ ಶೋನ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ, ಫಿನಾಲೆ ಮಾತ್ರ ರಾಜ್ಯದ ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ. ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಅನುಶ್ರೀ ಅವರು ನಿರೂಪಣೆ ಮಾಡಿದರು. ಹಂಸಲೇಖ ಅವರು ಮಹಾಗುರುಗಳಾಗಿ ವೇದಿಕೆ ಮೇಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮೊದಲಾದವರು ಜಡ್ಜ್ ಸ್ಥಾನದಲ್ಲಿದ್ದರು. ಅಂತಿಮ ಘಟ್ಟದಲ್ಲಿ ಪ್ರಗತಿ, ಶಿವಾನಿ ಹಾಗೂ ತನುಶ್ರೀ ಇದ್ದರು. ಈ ಪೈಕಿ ಪ್ರಗತಿ ಬಡಿಗೇರ್ ಗೆದ್ದು ಬೀಗಿದ್ದಾರೆ.

ವಿನ್ನರ್ ಆದ ಪ್ರಗತಿ ಬಡಿಗೇರ್ ಗೆ ನೆಲಮಂಗಲ ಬಳಿ 30-40 ಸೈಟ್ ಸಿಕ್ಕಿದೆ. ಅದರ ಮೌಲ್ಯ 21 ಲಕ್ಷ. ಅಲ್ಲದೇ 4 ಲಕ್ಷ ರೂಪಾಯಿ ನಗದು ದೊರೆತಿದೆ. ಮೊದಲ ರನ್ನರ್ ಅಪ್ ಶಿವಾನಿಗೆ 20 ಲಕ್ಷ ರೂಪಾಯಿ ನಗದು ಸಿಕ್ಕಿದೆ. ಎರಡನೇ ರನ್ನರ್ ಅಪ್ ತನುಶ್ರೀಗೆ ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ಮತ್ತು ಐದು ಲಕ್ಷ ರೂಪಾಯಿ ನಗದು ದೊರೆತಿದೆ. ಅವರೆಲ್ಲರಿಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.