ಸರ್ಕಾರ ಸುಭದ್ರವಾಗಲಿದೆ ಎಂದು ಭರವಸೆ ನೀಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ…

428
firstsuddi

ಬೆಂಗಳೂರು : ಕ್ಯಾಬಿನೇಟ್ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರ ಸುಭದ್ರವಾಗಲಿದೆ ಎಂದು ಭರವಸೆ ನೀಡಿದ್ದು, ಸ್ಪೀಕರ್ ಹಾಗೂ ಕಾನೂನಿನ ಮುಖಾಂತರ ನಾವು ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ. ಹೇಗೆ ನಾವು ಸರ್ಕಾರ ಉಳಿಸಿಕೊಳ್ಳುತ್ತೇವೆ ಎಂಬ ಚಿಂತೆ ನಿಮಗೆ ಬೇಡ. ಬಿಜೆಪಿಯವರ ಜೊತೆ ತರಾಟೆಗೆ ಯಾರು ಹೋಗಬೇಡಿ. ಎಲ್ಲರೂ ಒಗ್ಗಾಟ್ಟಾಗಿ ಇರಿ. ಇದೇ ನೀವು ನನಗೆ ಮಾಡುವ ದೊಡ್ಡ ಉಪಕಾರ ಎಂದು ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.