ಸಿದ್ದರಾಮಯ್ಯ ಅವರು ಪ್ರತಿದಿನ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಏನೇನೋ ಹೇಳುತ್ತಿದ್ದಾರೆ-ಡಿಸಿಎಂ ಗೋವಿಂದ ಕಾರಜೋಳ.

246
firstsuddi

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾ ಕಾಲಿ ಕುಳಿತಿದ್ದಾರೆ. ಹೀಗಾಗಿ ಜನರು ತಮ್ಮನ್ನು ಮರೆಯಬಾರದು ಎಂದು ಪ್ರತಿ ದಿನ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬೇಕೆಂದು ಏನೇನೂ ಹೇಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರವನ್ನು ನೀಡಿದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ್ದಾರೆ. ಸರ್ಕಾರದ ಆದೇಶಗಳು ಬಾಯಿಂದ ಇರುವುದಿಲ್ಲ. ಬ್ಲ್ಯಾಕ್ ಆ್ಯಂಡ್ ವೈಟ್ ನಲ್ಲಿರುತ್ತವೆ, ಓದಬಹುದಲ್ಲ. ಪ್ರೊಸಿಡಿಂಗ್ಸ್ ಕಾಪಿ ಓದಬಹುದಲ್ಲ. ಒಂದು ಬಾರಿ ಸಿದ್ದರಾಮಯ್ಯ ಅವರು ಅದನ್ನು ಓದಲಿ. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಪರಿಹಾರದ ಬಗ್ಗೆ ಸಮಿತಿಗಳಿರುತ್ತವೆ. ಅದರಂತೆ ಪರಿಹಾರ ಮಂಜೂರಾಗುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ಇಂತಹ ಅನೇಕ ಸಂದರ್ಭಗಳು ಬಂದಿವೆ. ಎಲ್ಲ ಸಂದರ್ಭ ನೋಡಿದರೆ ಅತೀ ಹೆಚ್ಚು ಪರಿಹಾರ ಧನ ನೀಡಿದ್ದು ಮೋದಿ ಅವರ ಸರ್ಕಾರ. ಈ ಹಿಂದಿನ ಸರ್ಕಾರ ಎಷ್ಟು ಪರಿಹಾರವನ್ನು ನೀಡಿದೆ ಎಂದು ಜನರ ಮುಂದೆ ಇಡಲಿ. ಭಾವನಾತ್ಮಕ ಸಮಸ್ಯೆ ಕೆರಳಿಸಲು ಮನಬಂದಂತೆ ಹೇಳಬಾರದು ಎಂದು ಕಿಡಿಕಾರಿದ್ದಾರೆ.