ನವದೆಹಲಿ : ಪಕ್ಷವನ್ನು ಸೇರಿದರೆ ತಮ್ಮ ಮೇಲಿನ ಇಡಿ, ಸಿಬಿಐ ಪ್ರಕರಣಗಳಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಆಫರ್ ನೀಡಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಪ್ ತೊರೆದು ಬಿಜೆಪಿಗೆ ಬನ್ನಿ. ನಿಮ್ಮ ವಿರುದ್ಧದ ಎಲ್ಲ ಸಿಬಿಐ ಮತ್ತು ಇಡಿ ಕೇಸುಗಳನ್ನು ಮುಕ್ತಾಯಗೊಳಿಸುವ ಭರವಸೆ ನೀಡುತ್ತೇವೆ ಎಂದು ಬಿಜೆಪಿಯಿಂದ ನನಗೆ ಸಂದೇಶ ಬಂದಿದೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ನನ್ನ ತಲೆಯನ್ನು ಕತ್ತರಿಸುತ್ತೇನೆ. ಆದರೆ ಭ್ರಷ್ಟ-ಪಿತೂರಿಗಾರರ ಮುಂದೆ ತಲೆಬಾಗುವುದಿಲ್ಲ. ನನ್ನ ಮೇಲಿರುವ ಕೇಸುಗಳೆಲ್ಲಾ ಸುಳ್ಳು, ಏನು ಬೇಕಾದರೂ ಮಾಡಿ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ತಿಳಿಸಿದ್ದಾರೆ.










