ಚಾಮರಾಜನಗರ : ಸೀಬೆಹಣ್ಣು ಕೀಳಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೇಚಣ್ಣ ಎಂಬುವವರ ಮಕ್ಕಳಾದ ಪೂಜಿತಾ ಹಾಗೂ ಪುಣ್ಯ ಮೃತ ಸಹೋದರಿಯರು. ಇಂದು ಬೆಳಗ್ಗೆ ತಿಂಡಿ ತಿಂದು ಬಳಿಕ ಸೀಬೆ ಹಣ್ಣು ಕೀಳಲೆಂದು ಜಮೀನಿಗೆ ತೆರಳಿದ್ದಾರೆ. ಸೀಬೆ ಮರ ಹತ್ತಿ ಹಣ್ಣು ಕೀಳುತ್ತಿರುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಿಂದ ಮೇಲೆ ಬರಲಾಗದೆ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










