‘2024 ಮೋದಿ ಒನ್ಸ್ ಮೋರ್’ – ಬರ್ಲಿನ್​ನಲ್ಲಿ ಕೇಳಿ ಬಂತು ಘೋಷ ವಾಕ್ಯ…

52
firstsuddi

ಬರ್ಲಿನ್ : ಜರ್ಮನಿಯ ಬರ್ಲಿನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಷಣ ಮಾಡಲು ವೇದಿಕೆಗೆ ಬರುತ್ತಿದ್ದಂತೆ ಅಲ್ಲಿ ನೆಲೆಸಿರುವ ಭಾರತೀಯರು `2024 ಒನ್ಸ್ ಮೋರ್ ಮೋದಿ’ (2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು) ಎಂದು ಘೋಷಣೆ ಕೂಗಿದರು. ‘2024, ಮೋದಿ ಒನ್ಸ್ ಮೋರ್’ ಘೋಷಣೆ ಪ್ರತಿಧ್ವನಿಸುತ್ತಿದ್ದಂತೆ ಸಭಾಂಗಣದಲ್ಲಿ ನೆರೆದಿದ್ದ ಜನರು ಧ್ವಜಗಳನ್ನು ಬೀಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜರ್ಮನಿಯಲ್ಲಿ ಭಾರತೀಯರನ್ನ ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನೊಂದಿಗೆ ಭೇಟಿಯಾಗಲು ವಿವಿಧ ನಗರಗಳಿಂದ ನೀವೂ ಇಲ್ಲಿಗೆ ಆಗಮಿಸಿದ್ದು, ನನಗೆ ಸಂತೋಷವಾಗಿದೆ ಎಂದರು.

ಯಾವುದೇ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಇಂದು ಭಾರತದಲ್ಲಿ ಜೀವನ ಗುಣಮಟ್ಟ, ಶಿಕ್ಷಣದ ಗುಣಮಟ್ಟ ಸೇರಿದಂತೆ ಎಲ್ಲ ಕ್ಷೇತ್ರಗಳೂ ಮುನ್ನಡೆಯುತ್ತಿವೆ. ಅಧಿಕಾರ ಶಾಹಿಯಾಗಿದ್ದ ಕಚೇರಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿವೆ. ಸರ್ಕಾರ ತನ್ನ ಸುಧಾರಣೆಗಳ ಮೂಲಕ ದೇಶವನ್ನು ಪರಿವರ್ತಿಸುತ್ತಿದೆ. ಎಂದು ತಿಳಿಸಿದರು.

ರೈತರ ಪರಿಹಾರಧನ, ವಿದ್ಯಾರ್ಥಿವೇತನ ಇತರ ಸರ್ಕಾರದ ನೆರವುಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 10 ಸಾವಿರ ಸೇವೆಗಳು ಆನ್ ಲೈನ್ ನಲ್ಲೇ ಲಭ್ಯವಾಗುತ್ತಿದೆ. ಹಾಗಾಗಿ ಯಾರಿಗೂ ವಂಚನೆಯಾಗುವುದಿಲ್ಲ. ಇನ್ನು ಮುಂದೆ ನಾನು ದೆಹಲಿಯಿಂದ 1 ರೂ. ಕಳುಹಿಸಿದರೆ, ಜನರಿಗೆ 15 ಪೈಸೆ ಮಾತ್ರ ತಲುಪುತ್ತದೆ’ ಎಂದು ಯಾವ ಪ್ರಧಾನಿಯೂ ಹೇಳಬೇಕಾಗಿಲ್ಲ’ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು.