ಸ್ವಚ್ಛ ಸರ್ವೇಕ್ಷಣ-2021 ಪ್ರಶಸ್ತಿ ಪ್ರದಾನ – ಮೈಸೂರಿಗೆ ಐದನೇ ಸ್ಥಾನ…

63
firstsuddi

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಸ್ವಚ್ಛ ಸರ್ವೇಕ್ಷಣ 2021ರ ಪ್ರಶಸ್ತಿ ಘೋಷಿಸಿ, ಪ್ರದಾನ ಮಾಡಿದ್ದು, ಮೈಸೂರಿಗೆ ಐದನೇ ಸ್ಥಾನ ಲಭಿಸಿದೆ.

ಕೇಂದ್ರ ಸರ್ಕಾರದಿಂದ ನೀಡುವ ಸ್ವಚ್ಛನಗರ ಪುರಸ್ಕಾರವನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ವೀಕಾರ ಮಾಡಿದ್ದಾರೆ. ಕಳೆದ ವರ್ಷ ಘೋಷಣೆಯಗಿದ್ದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಐದನೇ ಸ್ಥಾನ ಲಭಿಸಿತ್ತು.

ಇನ್ನೂ ಕರ್ನಾಟಕದ 4 ನಗರ ಪಾಲಿಕೆಗಳಿಗೆ ಸ್ವಚ್ಛ ನಗರ ಪುರಸ್ಕಾರ ಲಭಿಸಿದೆ. ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಸ್ವಚ್ಛನಗರ ಪುರಸ್ಕಾರ ದೊರಕಿದೆ.