ಸ್ವಚ್ಛ ಸರ್ವೇಕ್ಷಣ 2021 – ಸತತ 5ನೇ ಬಾರಿ ಸ್ವಚ್ಛ ನಗರ ಪಟ್ಟ ಅಲಂಕರಿಸಿದ ಇಂದೋರ್.

73
firstsuddi

ನವದೆಹಲಿ : ಮಧ್ಯಪ್ರದೇಶದ ಇಂದೋರ್ ಸತತ 5ನೇ ಬಾರಿಗೆ ಸ್ವಚ್ಛ ನಗರ ಪಟ್ಟವನ್ನು ಅಲಂಕರಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಸ್ವಚ್ಛ ಸರ್ವೇಕ್ಷಣ 2021ರ ಅನ್ವಯ ದೇಶದ 342 ನಗರಗಳಿಗೆ ಪ್ರಶಸ್ತಿ ಘೋಷಿಸಿ, ಪ್ರಧಾನ ಮಾಡಿದ್ದಾರೆ. ಈ ಪ್ರಶಸ್ತಿ ಪ್ರಧಾನದಲ್ಲಿ ಇಂದೋರ್ ಗೆ ಮೊದಲ ಪ್ರಶಸ್ತಿ ಎಂದು ಫೋಷಿಸಲಾಗಿದೆ.

ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೇಯಲ್ಲಿ ಛತ್ತೀಸ್ ಗಡ ಮೊದಲ ಸ್ಥಾನ ಪಡೆದಿದೆ. ಹಾಗೆಯೇ ಸ್ವಚ್ಛ ಗಂಗಾ ಪಟ್ಟಣ ವಿಭಾಗದಲ್ಲಿ ವಾರಣಾಸಿ ಪ್ರಥಮ ಸ್ಥಾನ ಪಡೆದಿದೆ.