ಹಣ ಕೊಡದಿದ್ದಕ್ಕೆ ತಂದೆ ಎದುರೇ ಕೈ, ಕತ್ತು ಕೊಯ್ದುಕೊಂಡ ಮಗ.

98
firstsuddi

ಚಾಮರಾಜನಗರ : ಹಣ ಕೊಡದಿದ್ದಕ್ಕೆ ತಂದೆ ಎದುರೇ ಮಗ ಚಾಕುವಿನಿಂದ ಕೈ, ಕತ್ತು ಕೊಯ್ದುಕೊಂಡ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಸಂತೋಷ್(29) ತನ್ನ ತಂದೆ ಸುರೇಶ್ ಕುಮಾರ್ ಬಳಿ ಸಾಲ ತೀರಿಸಲು 20 ಸಾವಿರ ರೂಪಾಯಿ ಕೇಳಿದ್ದಾನೆ. ಹಣ ನೀಡಲು ತಂದೆ ನಿರಾಕರಿಸಿದ ಕಾರಣ ಚಾಕುವಿನಿಂದ ತನ್ನ ಕತ್ತು ಹಾಗೂ ಕೈಗೆ ಇರಿದು ಕೊಂಡಿದ್ದಾನೆ. ಸದ್ಯ ಸಂತೋಷ್ ನನ್ನು ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯದ ದಾಸೋಹ ಭವನದಲ್ಲಿ ಅಡುಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.