ಹಾಸನ : ನೆರೆ ಪರಿಹಾರ ಲೋಪ ಮುಚ್ಚಿ ಹಾಕಲು ಫೋನ್ ಟ್ಯಾಪಿಂಗ್ ಸೇರಿ ಬೇರೆ ಬೇರೆ ವಿವಾದ ಎತ್ತುತ್ತಿದ್ದಾರೆ : ಹೆಚ್.ಡಿ. ರೇವಣ್ಣ.

389

ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಅತೀವೃಷ್ಟಿಯಿಂದ ಹಾನಿಯಾಗಿ ತಿಂಗಳೇ ಕಳೆದರೂ ಈವರೆಗೂ ಕೇಂದ್ರ ಸರ್ಕಾರದಿಂದ ಬಿಡಿಗಾಸು ಬಂದಿಲ್ಲ. ಹಾಸನ ಜಿಲ್ಲೆಯಲ್ಲಿ ಆಗಿರುವ 375 ಕೋಟಿ ನಷ್ಟಕ್ಕೆ ಕೇವಲ 15 ಕೋಟಿ ನೀಡಿದ್ದಾರೆ. ಕೇಂದ್ರದಿಂದ ಈವರೆಗೂ ಹಣ ತರಲು ಏಕೆ ಆಗುತ್ತಿಲ್ಲ ಎಂದು ಗೊತ್ತಿಲ್ಲ. ಪರಿಹಾರ ಕೊಡದೇ ಇದ್ದಮೇಲೆ ಇವರಿಗೆ ಅಧಿಕಾರ ನಡೆಸಲು ನೈತಿಕತೆ ಎಲ್ಲಿದೆ. ಕೇಂದ್ರದ ಬಳಿ ನಿಯೋಗ ತೆಗೆದುಕೊಂಡು ಹೋಗಲು ಇವರಿಗೆ ಹೆದರಿಕೆ ಏಕೆ. ವಿಪಕ್ಷಗಳ ವಿಶ್ವಾಸಕ್ಕೆ ಪಡೆದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಿ. ಆದರೆ ಈಗಾ ಸಿಎಂಗೆ ತಂತಿ ಮೇಲೆ ನಡೆಯುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು. ಈ ಪರಿಸ್ಥಿತಿಯಲ್ಲಿ ನಾವಿದ್ದಿದ್ದರೆ ರಾಜೀನಾಮೆ ನೀಡುತ್ತಿದ್ದೆವು. ಸಿಎಂ ಅವರ ಸುಪುತ್ರ ವಿಜಯೇಂದ್ರರನ್ನು ಮುಂದೆ ಬಿಟ್ಟಿದ್ದಾರೆ. ಬಿಜಿಎಸ್ ಸ್ವಾಮೀಜಿ ಫೋನ್ ಟ್ಯಾಪಿಂಗ್ ಮಾಡುವ ಅಗತ್ಯವಿಲ್ಲ. ಅದನ್ನು ವಿಚಾರಣೆ ಮಾಡಲು ನಮ್ಮ ಸಮಾಜದ ಜನ ಇದ್ದಾರೆ, ವಿಜಯೇಂದ್ರ ಯಾರು? ಎಂದು ಪ್ರಶ್ನಿಸಿದ್ದು, ಪರಿಸ್ಥಿತಿ ಹೀಗೆ ಮಂದುವರೆದರೆ ಬಿಜೆಪಿ ಊಟ ಮಾಡುವ ಕಾಲ ಬರಲಿದೆ. 2ತಿಂಗಳಿಂದ ಏನು ನಡೆಯುತ್ತಿದೆ ಎಂದು ರಾಜ್ಯದ ಜನ ನೋಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಮುಗಿಸಲು ರಾಷ್ಟ್ರೀಯ ಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ನೆರೆ ಪರಿಹಾರ ಲೋಪ ಮುಚ್ಚಿ ಹಾಕಲು ಫೋನ್ ಟ್ಯಾಪಿಂಗ್ ಸೇರಿ ಬೇರೆ ಬೇರೆ ವಿವಾದ ಎತ್ತುತ್ತಿದ್ದಾರೆ. ಕುಮಾರಸ್ವಾಮಿ ಫೊನ್ ಕದ್ದಾಲಿಕೆ ಮಾಡಿಲ್ಲ. ನಮ್ಮನ್ನು ಮಟ್ಟ ಹಾಕುತ್ತೇವೆ ಎಂದರೆ ಅದು ಅವರಿಗೇ ರಿವರ್ಸ್ ಆಗಲಿದೆ ಎಂದು ಎಚ್ಚರಿಕೆ ನೀಡಿದರು.