ಹಿಂದೂಗಳ ದೇವಾಲಯಕ್ಕೆ ಏಕೆ ಸರ್ಕಾರದ ಹಸ್ತಕ್ಷೇಪ? : ಸಿ.ಟಿ.ರವಿ.

72
firstsuddi

ಚಿಕ್ಕಮಗಳೂರು : ಹಿಂದೂ ದೇವಸ್ಥಾನದ ಆದಾಯ ಬೇರೆ ಕಡೆ ಹರಿದುಹೋಗದಂತೆ, ದೇವಸ್ಥಾನಗಳ ಆದಾಯವನ್ನು ದೇವಸ್ಥಾನಗಳಿಗೆ ಬಳಸುವ ವಿಚಾರವಾಗಿ ನಗರದಲ್ಲಿಂದು ಮಾತನಾಡಿದ ಶಾಸಕ ಸಿ.ಟಿ.ರವಿ ಅವರು, ಮುಸ್ಲಿಂಗೆ ವಕ್ಫ್ ಬೋರ್ಡ್ ಇದೆ. ಕ್ರಿಶ್ಚಿಯನ್ಸ್ ಗೆ ಅವರ ಬೋರ್ಡ್ ಇದೆ. ಅಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಹಿಂದೂಗಳ ದೇವಾಲಯಕ್ಕೆ ಏಕೆ ಸರ್ಕಾರದ ಹಸ್ತಕ್ಷೇಪ ಇರಬೇಕು?. ಈ ಮೂಲಕ ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು ಎಂದು ಹೇಳಿದ್ದಾರೆ.

ಕರೆಂಟ್ ಬಿಲ್ನಲ್ಲೂ ಮಸೀದಿ-ದೇವಸ್ಥಾನಕ್ಕೆ ಒಂದೊಂದು ರೇಟ್ ಇದೆಯಂತೆ. ಪರ್ ಯೂನಿಟ್ ರೇಟ್ ಎಷ್ಟು ಬಳಸುತ್ತಾರೋ ಅಷ್ಟು ಎಲ್ಲರಿಗೂ ಒಂದೇ ಇರಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಆಗಬಾರದು. ಭಕ್ತರು ಭಕ್ತಿ, ಭಾವನೆ ಬೆರಸಿ ದೇವಾಲಯಗಳಿಗೆ ಕಾಣಿಕೆ ನೀಡಿರುತ್ತಾರೆ. ದೇಶಾದ್ಯಂತ ದೇವಸ್ಥಾನಗಳು ಸಮಾಜದ ಸ್ವತ್ತು. ಹೀಗಾಗಿ ಸಮಾಜಕ್ಕೆ ವಾಪಸ್ ಕೊಡುವ ಕೆಲಸವಾಗಬೇಕು ಎಂದು ತಿಳಿಸಿದ್ದಾರೆ.