ಅಂಗನವಾಡಿ ಪ್ರಾರಂಭ ; ಮಕ್ಕಳಿಗೆ ಪುಷ್ಪಾರ್ಚನೆ ಮಾಡಿ, ಆರತಿ ಬೆಳಗಿ ಸ್ವಾಗತ…

75
firstsuddi

ಕೊಟ್ಟಿಗೆಹಾರ : ಇಂದಿನಿಂದ ಅಂಗನವಾಡಿಗಳು ಪ್ರಾರಂಭವಾದ ಹಿನ್ನಲೆಯಲ್ಲಿ ಬಣಕಲ್ ಸುತ್ತಮುತ್ತ ಅಂಗನವಾಡಿಗಳಲ್ಲಿ ಮಕ್ಕಳನ್ನು ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಸ್ವಾಗತಿಸಲಾಯಿತು.

ಬಣಕಲ್, ಗುಡ್ಡಟ್ಟಿ, ಚೇಗು, ತರುವೆ ಮುಂತಾದ ಗ್ರಾಮಗಳ ಅಂಗನವಾಡಿಗಳಲ್ಲಿ ಅಂಗನವಾಡಿಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಬ್ಲಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಲಾಯಿತು. ಮೊದಲ ದಿನವಾದ ಇಂದು ಮಕ್ಕಳು ಸಂಭ್ರಮ ಸಡಗರದಿಂದ ಅಂಗನವಾಡಿಗೆ ಆಗಮಿಸಿದ್ದರು. ಅಂಗನವಾಡಿಯನ್ನು ತಳಿರುತೋರಣಗಳಿಂದ ಸಿಂಗರಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯರಾದ ಎಸ್.ಬಿ ದೇವರಾಜ್ ಸಬ್ಲಿ, ಗ್ರಾ.ಪಂ ಪ್ರಮೀಳಾ, ಅಂಗನವಾಡಿ ಕಾರ್ಯಕರ್ತೆ ಸುಬ್ಬಮ್ಮ, ಸಹಾಯಕಿ ಪ್ರೇಮ ಮುಂತಾದವರು ಇದ್ದರು.

ಮರ್ಕಲ್ ಅಂಗನವಾಡಿಯಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಮಕ್ಕಳನ್ನು ಬರ ಮಾಡಿಕೊಳ್ಳಲಾಯಿತು. ನಿಡುವಾಳೆ ಅಂಗನವಾಡಿಯಲ್ಲಿ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಅವರು ದೀಪ ಬೆಳಗಿ ಮಕ್ಕಳಿಗೆ ಸಿಹಿ ಹಂಚಿದರು. ಅಂಗನವಾಡಿ ಶಿಕ್ಷಕಿ ವನಜಾಕ್ಷಿ, ಪೋಷಕರಾದ ಯಶವಂತ್, ನಿಶ್ಚಿತಾ, ಗೀತಾ, ಶಶಿಕುಮಾರ್, ಗ್ರಾ.ಪಂ ಸದಸ್ಯೆ ಲಕ್ಷ್ಮಿ, ಮುಖ್ಯ ಶಿಕ್ಷಕ ಉದಯ, ಶಾಲಾ ಸಿಬ್ಬಂದಿ ಲಕ್ಷ್ಮಿ, ಪೋಷಕರಾದ ಭಗತ್, ಯಶವಂತ್, ರಮ್ಯ, ಜಯಂತ್ ಮುಂತಾದವರು ಇದ್ದರು.