ಅಂತಿಮ ವರ್ಷದ ಪದವಿ ಪರೀಕ್ಷೆಯನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತಿಲ್ಲ-ಸುಪ್ರೀಂ ಕೋರ್ಟ್ ಆದೇಶ…

136
firstsuddi

ನವದೆಹಲಿ : ಮಹಾಮಾರಿ ಕೊರೊನಾ ಸೋಂಕಿನ ಭೀತಿಯಿಂದ ಬಾಕಿ ಉಳಿದಿರುವ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ನಡೆಸಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ದೇಶಾದ್ಯಂತ ಕೊರೊನಾ ವೈರಸ್ ಭೀತಿಯಿಂದಾಗಿ ಬಾಕಿ ಉಳಿದಿರುವ ಅಂತಿಮ ವರ್ಷದ ಪರೀಕ್ಷೆಯನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತಿಲ್ಲ. ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ರಾಜ್ಯಗಳು ಪರೀಕ್ಷೆಗಳನ್ನು ಮುಂದೂಡಬಹುದು. ಹಾಗೂ ಪರೀಕ್ಷೆಗಳ ದಿನಾಂಕ ನಿಗದಿ ಪಡಿಸಲು ವಿಶ್ವ ವಿದ್ಯಾಲಯಗಳು ಯುಜಿಸಿಯನ್ನು ಸಂಪರ್ಕಿಸಬಹುದು. ಪರೀಕ್ಷೆಗಳಿಲ್ಲದೆ ಪ್ರಮೋಟ್ ಮಾಡುವುದು ಅಸಾಧ್ಯ ಎಂದು ಆದೇಶ ಹೊರಡಿಸಿದೆ.