ಅಂಬರೀಶ್ ಅವರ ಸ್ಮಾರಕಕ್ಕೂ ಮೊದಲು ವಿಷ್ಣುವರ್ಧನ್ ಹಾಗೂ ರಾಜ್‍ಕುಮಾರ್ ಅವರ ಸ್ಮಾರಕ ಆಗಬೇಕು: ಸುಮಲತಾ ಅಂಬರೀಶ್…

585
firstsuddi

ಬೆಂಗಳೂರು : ಸುಮಲತಾ ಅಂಬರೀಶ್ ಅವರು ಇಂದು ಅಂಬರೀಶ್ ಅವರ 5ತಿಂಗಳ ಪುಣ್ಯಸ್ಮರಣೆಯ ಅಂಗವಾಗಿ ಹಲವು ಬಗೆಯ ಹೂಗಳಿಂದ ಸಿಂಗರಿಸಿದ ಅಂಬರೀಶ್ ಸಮಾಧಿಗೆ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ ಹಾಗೂ ಅಂಬರೀಶ್ ಅಭಿಮಾನಿಗಳು ಕೂಡಾ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್ ಅವರು ಅಂಬರೀಶ್ ಅವರ ಪ್ರೀತಿಯ ನೆನಪು ಇನ್ನೂ ಹಾಗೆಯೇ ಇದೆ. ಅಂಬರೀಶ್ ಅವರು ನಮ್ಮನ್ನು ಅಗಲಿ 5ತಿಂಗಳಾದರೂ ಅವರನ್ನು ಮರೆಯಲು ಸಾಧ್ಯಯವಿಲ್ಲ. ಅಂಬರೀಶ್ ಅವರ ಸ್ಮಾರಕಕ್ಕೂ ಮೊದಲು ವಿಷ್ಣುವರ್ಧನ್ ಹಾಗೂ ರಾಜ್‍ಕುಮಾರ್ ಅವರ ಸ್ಮಾರಕ ಆಗಬೇಕು ಎಂದು ಹೇಳಿದ್ದಾರೆ.