ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ…

346
firstsuddi

ಫಸ್ಟ್ ಸುದ್ದಿ : ಫ್ಯಾನ್ಸಿ ಚಂಡಮಾರುತ ತಮಿಳನಾಡಿಗೆ ಅಪ್ಪಳಿಸಿದ್ದು, ಇದರಿಂದ ದಕ್ಷಿಣಭಾರತದಲ್ಲಿ 5ರಿಂದ 6ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ 24ಗಂಟೆಗಳಲ್ಲಿ ತಮಿಳುನಾಡಿನಾಧ್ಯಂತ 50ಮಿ.ಮೀನಷ್ಟು ಮಳೆಯಾಗಲಿದೆ ಎಂದು ವರದಿಯಾಗಿದ್ದು, ಏಪ್ರಿಲ್‍ನಲ್ಲಿ ಚಂಡಮಾರುತದ ಕಾಲ ಆರಂಭವಾಗಲಿದ್ದು, ಅತೀ ಹೆಚ್ಚು ಉಷ್ಣಾಂಶದಿಂದಾಗಿ ಭಾರಿ ಗಾಳಿ ಬೀಸಲಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಸೋಮವಾರದಿಂದ ಬುಧವಾರದವರೆಗೆ ಸಾಮಾನ್ಯವಾಗಿದ್ದ ಸಮುದ್ರ ಅಲೆಗಳ ರಭಸ ಬುಧವಾರದಿಂದ ಹೆಚ್ಚಾಗಲಿದೆ. ಚಂಡಮಾರುತ ಬಂಗಾಳಕೊಲ್ಲಿಯ ಪೂರ್ವಭಾಗದಿಂದ ದಕ್ಷಿಣಭಾಗವನ್ನು ಪ್ರವೇಶಿಸಿದ್ದು, 3-4ಕ್ಕಿಂತ ಹೆಚ್ಚು ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಆರಂಭವಾಗಲಿದ್ದು, ಇದರಿಂದ ವಾರಪೂರ್ತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.