ಅಗ್ನಿಪಥ್ ನೇಮಕಾತಿ ಯೋಜನೆ : ಆರು ದಿನಗಳಲ್ಲಿ 1.83 ಲಕ್ಷಕ್ಕೂ ಹೆಚ್ಚು ಅರ್ಜಿ.

60

ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯಡಿ ಭಾರತೀಯ ವಾಯುಪಡೆ(ಐಎಎಫ್)ಗೆ ಈವರೆಗೆ ಅಂದರೆ ಆರು ದಿನಗಳಲ್ಲಿ ಒಟ್ಟು 1.83 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಭಾರತೀಯ ವಾಯುಪಡೆ(ಐಎಎಫ್) ಇಲ್ಲಿಯವರೆಗೆ, 1,83,634 ಭವಿಷ್ಯದ ಅಗ್ನಿವೀರ್ ಗಳು ನೋಂದಣಿ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ತಿಳಿಸಿದೆ.

ಜೂನ್ 24 ರಿಂದ ಅಗ್ನಿಪಥ್ ಯೋಜನೆಯ ನೋಂದಣಿ ಆರಂಭವಾಗಿದ್ದು, ಸೋಮವಾರದವರೆಗೆ 94,281 ಹಾಗೂ ಭಾನುವಾರದವರೆಗೆ 56,960 ಅರ್ಜಿಗಳು ಬಂದಿದ್ದವು.

ಜೂನ್ 14 ರಂದು ಈ ಯೋಜನೆಯ ಘೋಷಣೆಯ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ವಿರೋಧ ಪಕ್ಷಗಳು ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು.