ಆಧಾರ್ – ಪ್ಯಾನ್ ಜೋಡಣೆ ಗಡುವು ಮಾರ್ಚ್ 31, 2022ರ ತನಕ ವಿಸ್ತರಣೆ…

93
firstsuddi

ನವದೆಹಲಿ : ಆಧಾರ್ – ಪ್ಯಾನ್ ಜೋಡಣೆ ಮಾಡಲು ಇದ್ದ ಗಡುವು 2022ರ ಮಾರ್ಚ್‍ವರೆಗೆ ವಿಸ್ತರಣೆ ಮಾಡಲಾಗಿದೆ.

ಸದ್ಯ ಸೆಪ್ಟೆಂಬರ್ 30, 2021ರವರೆಗೆ ಇದ್ದ ಆಧಾರ್ ಜೊತೆ ಪ್ಯಾನ್ ಜೋಡಣೆ ಮಾಡುವ ಗಡುವು ಮಾರ್ಚ್ 31, 2022ರ ತನಕ ವಿಸ್ತರಿಸಲಾಗಿದೆ. ಕೊವಿಡ್ -19 ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಂಕಷ್ಟವನ್ನು ಪರಿಹರಿಸಲು, ನಿಯಮಾವಳಿಗಳನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಕಾಲಾವಧಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಹೇಳಿದೆ.

ಅಲ್ಲದೆ, ಆದಾಯ-ತೆರಿಗೆ ಕಾಯ್ದೆಯಡಿ ದಂಡ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30, 2021 ರಿಂದ ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ. ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ 1988ರ ಅಡಿಯಲ್ಲಿ ತೀರ್ಪು ನೀಡುವ ಪ್ರಾಧಿಕಾರದಿಂದ ಸೂಚನೆ ನೀಡುವ ಮತ್ತು ಆದೇಶವನ್ನು ಜಾರಿಗೊಳಿಸುವ ಕಾಲಮಿತಿಯನ್ನು ಮಾರ್ಚ್ 2022ರ ವರೆಗೆ ವಿಸ್ತರಿಸಲಾಗಿದೆ.