ಆರೋಗ್ಯಕರ ಕೂದಲು ಬೆಳೆಸಬೇಕೆ? ಇಲ್ಲಿದೆ ಸರಳ ಪರಿಹಾರ…

3267
firstsuddi

 

ಸಾಮಾನ್ಯವಾಗಿ ಹೆಣ್ಣು ಮಕ್ಕಳು ದಟ್ಟವಾದ ಉದ್ದನೆಯ ಕೂದಲಿನ ಆರೈಕೆಗಾಗಿ ಹೆಚ್ಚು ಗಮನ ಹರಿಸುತ್ತಾರೆ. ದಟ್ಟವಾದ ಉದ್ದನೆಯ ಕೂದಲು ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಉದ್ದನೆಯ ಕೂದಲನ್ನು ಬೆಳೆಸಬೇಕೆಂಬ ಆಸೆಯಿಂದ ಮಾರುಕಟ್ಟೆಯಲ್ಲಿ ಸಿಗುವಂತಹ ಶ್ಯಾಂಪೂ, ಕಂಡಿಷನರ್‍ಗಳನ್ನು ಉಪಯೋಗಿಸುತ್ತಾರೆ. ಆದರೆ ಇದರಿಂದ ಯಾವುದೇ ಉತ್ತಮ ಫಲಿತಾಂಶ ಸಿಗುವುದಿಲ್ಲ. ಹಾಗೂ ಅದರಲ್ಲಿ ಬಳಸಿರುವಂತಹ ರಾಸಾಯನಿಕ ವಸ್ತುಗಳಿಂದ ಕೂದಲು ಇನ್ನಷ್ಟು ಉದುರ ತೊಡಗುತ್ತದೆ. ಇದರಿಂದ ಆರೋಗ್ಯವಂತ ಕೂದಲನ್ನು ಹೊಂದುವಲ್ಲಿ ವಿಫಲರಾಗುತ್ತಾರೆ.
ಇತ್ತೀಚಿನ ಒತ್ತಡದ ಜೀವನ ಶೈಲಿಯಲ್ಲಿ ಕೂದಲಿಗೆ ಸರಿಯಾದ ಆರೈಕೆ, ಪೋಷಣೆ ಇಲ್ಲದ ಕಾರಣ ಕೂದಲು ಉದುರುವುದು, ಬೆಳ್ಳಗಾಗುವುದು, ತಲೆಯಲ್ಲಿ ಹೊಟ್ಟಾಗುವುದನ್ನು ಕಾಣಬಹುದು. ಈ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ದಟ್ಟವಾದ ಆರೋಗ್ಯವಾದ ಕೂದಲನ್ನು ಪಡೆಯಬಹುದು. ಇದರಿಂದ ಯಾವುದೇ ಸೈಡ್ ಎಫೆಕ್ಟ್‍ಗಳು ಇರುವುದಿಲ್ಲ.

ಕೂದಲು ಉದುರುವಿಕೆಗೆ ಸರಳ ಮನೆ ಮದ್ದು :
• ಮೊಸರು ಮತ್ತು ಈರುಳ್ಳಿ ರಸ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗಿ, ತಲೆ ಹೊಟ್ಟು ಕಡಿಮೆಯಾಗುತ್ತದೆ
• ಈರುಳ್ಳಿ ರಸವನ್ನು ತಲೆಗೆ ಹಚ್ಚುವುದರಿಂದ ಆರೋಗ್ಯವಂತ ಕೂದಲನ್ನು ಹೊಂದಬಹುದು.
• ಲೋಳೆರಸವನ್ನು ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
• ಒಣಗಿಸಿದ ತುಳಸಿ ಎಲೆ, ತೆಂಗಿನ ಎಣ್ಣೆ, ಮೆಂತ್ಯೆಯನ್ನು ಬಿಸಿಮಾಡಿ ಶೋಧಿಸಿ ಬಳಸುವುದರಿಂದ ದಟ್ಟವಾದ ಕೂದಲನ್ನು ಹೊಂದಬಹುದು.
• ಬಾಳೆಹಣ್ಣಿನ ಪೇಸ್ಟ್, ಮೊಸರು ಹಾಗೂ ಅರಳೆಣ್ಣೆ ಮಿಶ್ರಣ ಮಾಡಿ ಬಳಸುವುದರಿಂದ ಕೂದಲು ಹೊರಟಾಗುವುದನ್ನು ತಡೆಯಬಹುದು.
• ಈರುಳ್ಳಿ ರಸ ಹಾಗೂ ತೆಂಗಿನ ಎಣ್ಣೆ ಮಿಶ್ರಣ ಮಾಡಿ ಹಾಕುವುದರಿಂದ ಕೂದಲಿನ ಕಾಂತಿ ಹೆಚ್ಚುತ್ತದೆ.
• ತೆಂಗಿನ ಎಣ್ಣೆ, ಕರಿಬೇವು ಹಾಗೂ ಈರುಳ್ಳಿ ರಸವನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ.
• ಪೋಷಕಾಂಶ ಆಹಾರವನ್ನು ಸೇವಿಸುವ ಮೂಲಕವು ಕೂದಲುದುರುವಿಕೆಯನ್ನು ಕಡಿಮೆ ಮಾಡಬಹುದು.
• ದಾಸವಾಳ ಹೂಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ಬಳಸುವುದರಿಂದ ಕೂದಲು ಕಾಂತಿಯುತವಾಗಿ ಬೆಳೆಯುತ್ತದೆ.
• ತೆಂಗಿನ ಎಣ್ಣೆಯಲ್ಲಿ ನಲ್ಲಿಕಾಯಿಯನ್ನು ಹಾಕಿ ಕುದಿಸಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.
• ಕರಿಬೇವಿನ ಎಲೆ, ತೆಂಗಿನ ಎಣ್ಣೆಯನ್ನು ಕುದಿಸಿ ಬಳಸುವುದರಿಂದ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ
• ಕೊಬ್ಬರಿ ಎಣ್ಣೆ ಹಾಗೂ ನಿಂಬೆಹಣ್ಣಿನ ರಸದ ಮಿಶ್ರಣವನ್ನು ಕೂದಲಿಗೆ ಬಳಸುವುದರಿಂದ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ.
• ಸೀಬೆ ಎಲೆಗಳನ್ನು ನೀರಿನೊಂದಿಗೆ ಕುದಿಸಿ ಬಳಸುವುದರಿಂದ ಕಂಡಿಶನರ್ ಬಳಸುವ ಅಗತ್ಯವಿರುವುದಿಲ್ಲ.
• ಕರಿಬೇವು ಕುದಿಸಿ ನಂತರ ಆ ನೀರನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತಿದೆ.
• ತುಳಸಿ ಪುಡಿ, ಮೊಸರು, ನಲ್ಲಿಕಾಯಿ ಪುಡಿ ಬಳಸುವುದರಿಂದ ಕೂದಲು ದಟ್ಟವಾಗಿ ಬೆಳೆಯಲು ಸಹಕಾರಿಯಾಗಿದೆ.
• ಕರಿಬೇವಿನ ಪೇಸ್ಟ್ ಹಾಗೂ ಮೊಸರು ಮಿಶ್ರಣ ಮಾಡಿ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ದೂರವಿಡಬಹುದು.