ಆರ್ ಬಿ ಐನ ಡೆಪ್ಯುಟಿ ಗವರ್ನರ್ ವಿರಾಳ್ ಆಚಾರ್ಯ ರಾಜೀನಾಮೆ…

221
firstsuddi

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್‍ನ ಡೆಪ್ಯುಟಿ ಗವರ್ನರ್ ವಿರಾಳ್ ಆಚಾರ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರು 2017 ರಲ್ಲಿ ಆರ್ ಬಿ ಐ ನ ಗವರ್ನರ್ ಆಗಿ ನೇಮಕಗೊಂಡಿದ್ದು, ಹಣಕಾಸು ನೀತಿ ವಿಷಯಕ್ಕೆ ಸಂಬಂಧಿಸಿದಂತೆ ವಿರಾಳ್ ಆಚಾರ್ಯ ಅವರು ಗವರ್ನರ್ ಶಶಿಕಾಂತ್ ಅವರ ಜೊತೆ ಬಿನ್ನಾಭಿಪ್ರಾಯವನ್ನು ಹೊಂದಿದ್ದರು ಎನ್ನಲಾಗಿದ್ದು, ತಮ್ಮ ಅಧಿಕಾರವಧಿ ಇನ್ನೂ 6ತಿಂಗಳು ಇರುವ ಮೊದಲೇ ರಾಜೀನಾಮೆ ನೀಡಿ ನ್ಯಾಯಾರ್ಕ್ ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.