ಇಂಡಿಗೋ ವಿಮಾನದಲ್ಲಿ ಕುಡಿದು ಅಶಿಸ್ತಿನ ವರ್ತನೆ – ಇಬ್ಬರು ಪ್ರಯಾಣಿಕರ ಬಂಧನ…

67
firstsuddi

ನವದೆಹಲಿ : ಇಂಡಿಗೋ ವಿಮಾನದಲ್ಲಿ ಕುಡಿದಿದ್ದ ಪ್ರಯಾಣಿಕರಿಬ್ಬರು ಗಲಾಟೆ ನಡೆಸಿ, ಅಶಿಸ್ತು ತೋರಿದ ಘಟನೆ ನಡೆದಿದೆ.

ದುಬೈನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ಏರ್​ಲೈನ್ಸ್ ವಿಮಾನದಲ್ಲಿ ಇಬ್ಬರು ಪಾನಮತ್ತ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಮಲೇರಿಸಿಕೊಂಡು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರನ್ನೂ ಬಂಧಿಸಲಾಗಿದೆ. ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ದುಬೈನಿಂದ ವಿಮಾನವು ಮುಂಬೈಗೆ ಬಂದಿಳಿಯಿತು. ನಂತರ ಆ ಇಬ್ಬರು ಅಶಿಸ್ತಿನ ಪ್ರಯಾಣಿಕರನ್ನು ಬಂಧಿಸಲಾಯಿತು. ಬಳಿಕ ಅವರನ್ನು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಜಾಮೀನು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದರು.