ಇಂಡಿಯಾ ಹೆಸರನ್ನು ಭಾರತ ಎಂದು ಬದಲಾವಣೆ ಮಾಡಿ : ಕಂಗನಾ ರಣಾವತ್.

94
firstsuddi

ಇಂಡಿಯಾ ಹೆಸರನ್ನು ಬದಲಾಯಿಸಿ ಭಾರತ ಎಂದು ಮರುನಾಮಕರಣ ಮಾಡಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಇಂಡಿಯಾ ಬದಲು ಭಾರತ ಎಂದು ಹೆಸರಿಡುವ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ಹೊರ ಬರಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ಅರ್ಥದ ಬಗ್ಗೆ ವಿವರಣೆಯನ್ನು ನೀಡಿರುವ ಕಂಗನಾ ಭಾರತ ಎಂಬುದು ಮೂರು ಸಂಸ್ಕೃತ ಅಕ್ಷರಗಳಿಂದ ಕೂಡಿದ ಪದವಾಗಿದೆ. ಭಾ( ಭಾವ), ರ(ರಾಗ), ತ( ತಾಳ) ಪದಗಳಿಂದ ಭಾರತ ಆಗಿದೆ. ಭಾರತದ ಆತ್ಮವಾಗಿರುವ ಆಧ್ಯಾತ್ಮಿಕತೆ ಮತ್ತು ಜ್ಞಾನ ಭಂಡಾರವನ್ನು ವಿಸ್ತರಿಸಿದರೆ, ನಾವು ಜಗತ್ತಿನ ಸರ್ವಶಕ್ತ ರಾಷ್ಟ್ರಗಳಲ್ಲಿ ಒಂದಾಗಬಹುದು. ನಮ್ಮ ವೇದಗಳು, ಯೋಗ ಮತ್ತು ಭಗವದ್ಗೀತೆಯ ಬಗ್ಗೆ ಎಲ್ಲರೂ ಹೆಚ್ಚು ಆಸಕ್ತಿಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.