ಬೆಂಗಳೂರು : ಇಂದಿನಿಂದ ಬಹುನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅಭಿನಯದ `ಯುವರತ್ನ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಥಿಯೇಟರ್ ಗಳಲ್ಲಿ ‘ಯುವರತ್ನ’ನ ಅಬ್ಬರ ಶುರುವಾಗಿದೆ. 2 ವರ್ಷಗಳ ಬಳಿಕ ಪುನೀತ್ ಸಿನಿಮಾ ಬಿಡುಗಡೆಯಾಗಿದ್ದು, ಬೆಳಗ್ಗೆ 5 ಗಂಟೆಯಿಂದಲೇ ಥಿಯೇಟರ್ ಗಳ ಮುಂದೆ ಅಭಿಮಾನಿಗಳು ಎಂಟ್ರಿ ಕೊಟ್ಟಿದ್ದು, ಅಪ್ಪು ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ತೆರೆಯ ಮೇಲೆ ಪವರ್ ಸ್ಟಾರ್ ಹವಾ ಕಣ್ತುಂಬಿಕೊಳ್ಳಲು ಥಿಯೇಟರ್ ಗಳಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಜೊತೆಗೆ ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಬೆಳಗ್ಗೆ ಆರು ಗಂಟೆಗೆ ಫ್ಯಾನ್ ಶೋ ಆರಂಭವಾಗಿದ್ದು, ಒಟ್ಟು 600ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಯುವರತ್ನ ರಿಲೀಸ್ ಆಗಿದೆ.
ಪುನೀತ್ ರಾಜ್ಕುಮಾರ್ ಜೊತೆ ಟಾಲಿವುಡ್ ನಟಿ ಸಯೀಶಾ ರೊಮ್ಯಾನ್ಸ್ ಮಾಡಿದ್ದು, ಪ್ರಕಾಶ್ ರೈ, ಸಾಯಿಕುಮಾರ್, ಧನಂಜಯ, ದಿಗಂತ್, ಸೋನು ಗೌಡ, ವಿಶಾಲ್ ಹೆಗ್ಡೆ, ಸಾಧುಕೋಕಿಲ, ರಂಗಾಯಣ ರಘು, ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ.