ಕಳಸ:ಸಾಮಾಜಿಕ ಜವಬ್ದಾರಿಯನ್ನು ಹೊಂದಿರುವ ಸಂಘ ಸಂಸ್ಥೆಗಳಿಂದ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುಕೂಲತೆ ಆಗುತ್ತದೆ: ಸುಜಯ ಸದಾನಂದ.

96
ಕಳಸ:ಸಾಮಾಜಿಕ ಜವಬ್ದಾರಿಯನ್ನು ಹೊಂದಿರುವ ಸಂಘ ಸಂಸ್ಥೆಗಳಿಂದ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುಕೂಲತೆ ಆಗುತ್ತದೆ ಎಂದು ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಹೇಳಿದರು.
ಕಳಸ ಕಲಶೇಶ್ವರ ದೇವಸ್ಥಾನದ ಬಳಿ ಕಳಸ ಜೆಸಿಐ ಸಂಸ್ಥೆ ಅಳವಡಿಸಿದ್ದ ಮೂರು ಸಿಸಿ ಕ್ಯಾಮರಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು.ಪ್ರಸ್ತುತ ಇಂದಿನ ದಿನಕ್ಕೆ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮರ ಅಳವಡಿಸುವುದು ಸೂಕ್ತ.ಆದರೆ ಇವೆಲ್ಲವನ್ನು ಪಂಚಾಯಿತಿ ವತಿಯಿಂದ ಮಾಡಲು ಸಾದ್ಯವಿರುವುದಿಲ್ಲ.ಆಗ ಜೆಸಿಐಯಂತಹ ಸಂಸ್ಥೆಗಳು ಆ ಕಾರ್ಯವನ್ನು ಮಾಡಿದಾಗ ಪಂಚಾಯಿತಿಗೆ ಸಾಕಷ್ಟು ಅನುಕೂಲವಾಗುತ್ತದೆ.ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಮತ್ತು ಕಳಸ ಪಟ್ಟಣಕ್ಕೆ ಎಂಟ್ರಿ ಕೊಡುವ ಸ್ಥಳದಲ್ಲಿ ಅಳವಡಿಸಿದ ಈ ಸಿಸಿ ಠೀವಿಯಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕಳಸ ಪಿಎಸ್‍ಐ ಗಾಯತ್ರಿ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿರುವುದರಿಂದ ಅಪರಾದಗಳು ನಡೆದಾಗ ಸುಲಭವಾಗಿ ಪತ್ತೆ ಮಾಡಬಹುದು.ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದಾಗ ಮಾತ್ರಪರಾದಿಗಳನ್ನು ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾದ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಜೆಸಿಐ ಅಧ್ಯಕ್ಷ ಅಶೋಕ್ ಜಾವಳಿ,ಕಾರ್ಯದರ್ಶಿ ಸಂತೋಷ್,ಖಜಾಂಚಿ ಪ್ರಶಾಂತ್ ಶೆಟ್ಟಿ,ನಿಖಟ ಪೂರ್ವ ಅಧ್ಯಕ್ಷ ಕೆಸಿ ಮಹೇಶ್,ಸದಸ್ಯರಾದ ಶ್ರೀಕಾಂತ್,ಸುಧಾಕರ್,ಶಿವಪ್ರಸಾದ್,ದೇವರಾಜ್,ಸತೀಶ್ ಇದ್ದರು.