ಸಿನಿಮಾ ಸ್ಟೈಲ್ ನಲ್ಲಿ ಲಾಂಗ್ ಹಿಡಿದು ರಸ್ತೆಗೆ ಬಂದ ಮಹಿಳೆ ; ಕಕ್ಕಾಬಿಕ್ಕಿಯಾಗಿ ಓಡಾಡಿದ ಜನ…

150
firstsuddi

ದಾವಣಗೆರೆ : ಸಿನಿಮಾ ಸ್ಟೈಲ್ ನಲ್ಲಿ ಮಹಿಳೆಯೊಬ್ಬಳು ಲಾಂಗ್ ಹಿಡಿದು ಊರು ತುಂಬಾ ಓಡಾಡುತ್ತಿದ್ದ ಮಹಿಳೆಯನ್ನು ಕಂಡು ಜನರು ಕಕ್ಕಾಬಿಕ್ಕಿಯಾದ ಘಟನೆ ಜಿಲ್ಲೆಯ ಚೆನ್ನಗಿರಿ ಪಟ್ಟಣದಲ್ಲಿ ನಡೆದಿದೆ.

ಮೂವತ್ತಾಲ್ಕು ವರ್ಷದ ರುಕ್ಮಿಣಿ ಎಂಬ ಮಹಿಳೆ ರೆಡ್ ಜರ್ಕಿನ್ ಜೀನ್ಸ್ ಪ್ಯಾಂಟ್ ತೊಟ್ಟು ಸಿನಿಮಿಯಾ ಸ್ಟೈಲ್ ನಲ್ಲಿ ಓಡಾಡಿದಲ್ಲದೇ ಖಾಸಗಿ ಬಸ್ ಗಳ ಮೇಲೆ ಮಚ್ಚು ಬೀಸಿದ್ದಾರೆ. ಸಮೀಪದಲ್ಲೇ ಆಟೋ ನಿಲ್ದಾಣವಿದ್ದು, ಆಟೋ ಚಾಲಕರುಗಳೆಲ್ಲಾ ಸೇರಿ ಮಹಿಳೆಯಿಂದ ಮಚ್ಚು ಕಿತ್ತುಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮಹಿಳೆ ಹೊಳಲಕೆರೆ ತಾಲ್ಲೂಕಿನ ಚಿಕ್ಕಜಾಜೂರು ಗ್ರಾಮದ ವಾಸಿಯಾಗಿದ್ದು, ಇವರು ಮಾನಸಿಕ ಅಸ್ವಸ್ಥೆ ಎನ್ನಲಾಗಿದ್ದು, ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದಳು ಎನ್ನಲಾಗಿದೆ. ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.