ಇಂದು ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಟೀಸರ್ ನಿನ್ನೆ ರಾತ್ರಿ ಬಿಡುಗಡೆ-ಯಶ್ ಬೇಸರ…

151

ಬೆಂಗಳೂರು : ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯದ ಬಹುನಿರೀಕ್ಷಿತ ಕೆ.ಜಿ.ಎಫ್2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇಂದು ಬಿಡುಗಡೆಯಾಗಬೇಕಿದ್ದ ಟೀಸರ್ ನಿನ್ನೆ ರಾತ್ರಿ ಬಿಡುಗಡೆಯಾಗಿದೆ. ಕೆ.ಜಿ.ಎಫ್2 ಚಿತ್ರತಂಡ ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಳಿಗ್ಗೆ 10:18ಕ್ಕೆ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆದರೆ ನಿನ್ನೆ ರಾತ್ರಿ ಕೆ.ಜಿ.ಎಫ್ ಚಿತ್ರದ ಟೀಸರ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದನ್ನು ಗಮನಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು ನಿನ್ನೆ ರಾತ್ರಿ ಟ್ವೀಟ್ ಮಾಡುವ ಮೂಲಕ ಇಂದು ರಾತ್ರಿ 9:29ಕ್ಕೆ ಕೆಜಿಎಫ್-2 ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದದರು. ಟೀಸರ್ ಬಿಡುಗಡೆ ಕಾದು ಕುಳಿತಿದ್ದ ಅಭಿಮಾನಿಗಳು ಟೀಸರ್ ಬಿಡುಗಡೆಯಾಗುತ್ತಿದ್ದಂತೆ 9:29ಕ್ಕೆ 74 ಸಾವಿರ ಮಂದಿ ಟೀಸರ್ ವೀಕ್ಷಿಸಿದ್ದು, ಈಗಾ ಕೆಜಿಎಫ್ ಟೀಸರ್ ಮೊದಲ ಸ್ಥಾನದಲ್ಲಿ ಇದೆ.
ಇಂದು ಬಿಡುಗಡೆಯಾಗಬೇಕಿದ್ದ ಟೀಸರ್ ನಿನ್ನೆ ರಾತ್ರಿ ಬಿಡುಗಡೆಯಾಗಿದ್ದರಿಂದ ನಟ ಯಶ್ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದು, ಕೆಜಿಎಫ್ 2 ಚಿತ್ರದ ಟೀಸರ್ ಬಳಿಗ್ಗೆ 10.18ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಯಾರೋ ಪುಣ್ಯಾತ್ಮರು, ಮಹಾನುಭಾವರು ಈಗಾಗಲೇ ಟೀಸರ್ ಲೀಕ್ ಮಾಡಿದ್ದಾರೆ. ಇದರಿಂದ ಅವರಿಗೇನು ಸಂತೋಷ ಸಿಗುತ್ತದೆಯೋ ಗೊತ್ತಿಲ್ಲ. ಆದರೂ ಅವರಿಗೆ ದೇವರು ಒಳ್ಳೆಯದು ಮಾಡಲಿ. ಮುಖ್ಯವಾಗಿ ಅಭಿಮಾನಿಗಳು ಟೀಸರ್ ಬಿಡುಗಡೆ ವೇಳೆ ಸಾಕಷ್ಟು ಸಂಭ್ರಮ ಆಚರಿಸಬೇಕೆಂದುಕೊಂಡಿದ್ದರು. ಆದರೆ, ಬೇಸರಗೊಳ್ಳಬೇಡಿ. ನಿಮಗಾಗಿ ಹೊಂಬಾಳೆ ಯೂಟ್ಯೂಬ್ ಪೇಜ್ ನಲ್ಲಿ 9.29ಕ್ಕೆ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆನಂದಿಸಿ. ಇದು ಬರೀ ಟೀಸರ್. ಸಿನಿಮಾ ಇನ್ನೂ ಮುಂದೆ ಇದೆ ಎಂದು ಹೇಳಿದ್ದಾರೆ.