ಇಷ್ಟು ವರ್ಷ ಎಲ್ಲಿ ಹೋಗಿದ್ರಿ?, ಸಿ.ಟಿ ರವಿಗೆ 20 ವರ್ಷ ಸಾಕಾಗಿಲ್ವಾ : ಮತದಾರರ ತರಾಟೆ…

80
firstsuddi

ಚಿಕ್ಕಮಗಳೂರು : ಇಷ್ಟು ವರ್ಷ ಎಲ್ಲಿ ಹೋಗಿದ್ರಿ? ಇವಾಗ ಗ್ರಾಮಕ್ಕೆ ಬಂದಿದ್ದೀರಾ? ನಮ್ಮ ಊರನ್ನು ಅಭಿವೃದ್ಧಿ ಮಾಡಲು ಸಿ.ಟಿ ರವಿಗೆ 15 ವರ್ಷ ಶಾಸಕರಾದರು ಇನ್ನು ಸಾಕಾಗಿಲ್ವಾ? ಎಂದು ಶಾಸಕ ಸಿ.ಟಿ ರವಿ ಬಾಮೈದ ಸುದರ್ಶನ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪನಿಗೆ ಮತದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಹಾಗೂ ಶಾಸಕ ಸಿ.ಟಿ ರವಿ ಬಾಮೈದ ಸುದರ್ಶನ್ ಚುನಾವಣಾ ಪ್ರಚಾರಕ್ಕೆಂದು ತಾಲೂಕಿನ ಉದ್ದೇಬೋರನಹಳ್ಳಿಗೆ ಭೇಟಿ ನೀಡಿದ್ದರು. ಈ ವೇಳೆ ಮತದಾರರು 20 ವರ್ಷದಿಂದ ಶಾಸಕರಾಗಿದ್ದಾರೆ, ಲಿಂಗಾಯತರ ಅಭಿವೃದ್ಧಿಗೆ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸಿ.ಟಿ ರವಿ ಸಂಬಂಧಿ ಸುದರ್ಶನ್, ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಗ್ರಾಮ ಮಟ್ಟದಲ್ಲಿ ಸಭೆ ಆರಂಭಿಸಿದ್ದಾರೆ. ಹೀಗೆ ಸಭೆ ಹಿನ್ನೆಲೆ ಕಳೆದ ರಾತ್ರಿ ಉದ್ದೇಬೋರನಹಳ್ಳಿಗೆ ಹೋದಾಗ ಮತದಾರರು ಕ್ಲಾಸ್ ತೆಗೆದುಕೊಂಡಿದ್ದಾರೆ. ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡ ಹಿನ್ನೆಲೆ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಘಟಕ ಕೂಡ ಮುಜುಗರಕ್ಕೀಡಾಗಿದೆ.