ಈಜಲು ಹೋಗಿ ನೀರುಪಾಲಾದ ಮೂವರು ವಿದ್ಯಾರ್ಥಿಗಳು…

66
firstsuddi

ಬಳ್ಳಾರಿ : ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ನಡೆದಿದೆ.

ಯಶವಂತ್, ಅಂಜಿನಿ, ಗುರುರಾಜ್ ಮೃತ ವಿದ್ಯಾರ್ಥಿಗಳು. ಮೂವರು ಹೊಸಪೇಟೆಯ ಎಂಜಿ ನಗರ, ಗುಂಡಾ ಗ್ರಾಮ ಮತ್ತು ಕೊಪ್ಪಳದ ಹೊಸ ನಿಂಗಾಪುರದ ವಿದ್ಯಾರ್ಥಿಗಳಾಗಿದ್ದಾರೆ.

ಕಾಲುವೆಯಲ್ಲಿ ಈಜಲು ಒಟ್ಟು 6 ವಿದ್ಯಾರ್ಥಿಗಳು ಹೋಗಿದ್ದರು. ಮೂವರು ವಾಪಾಸ್ ಬಂದ್ರೆ, ಇನ್ನೂ ಮೂವರು ನೀರು ಪಾಲಾಗಿದ್ದಾರೆ. ಹೊಸಪೇಟೆಯ ವಿಜಯನಗರ ಕಾಲೇಜ್ ನಲ್ಲಿ ಇಬ್ಬರು ಪಿಯುಸಿ ಓದುತ್ತಿದ್ದರೆ, ಒಬ್ಬ ಪದವಿ ವಿದ್ಯಾರ್ಥಿಯಾಗಿದ್ದ.

ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬದುಕುಳಿದ ಮೂವರು ವಿದ್ಯಾರ್ಥಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದಾರೆ.