ಉಡುಪಿ-ಚಿಕ್ಕಮಗಳೂರಿನ ಎಲ್ಲಾ ಜನತೆಗೆ ನನ್ನ ಮೊದಲ ಧನ್ಯವಾದ : ಶೋಭಾ ಕರಂದ್ಲಾಜೆ.

104
firstsuddi

ಚಿಕ್ಕಮಗಳೂರು : ಉಡುಪಿ-ಚಿಕ್ಕಮಗಳೂರಿನ ಎಲ್ಲಾ ಜನತೆಗೆ ನನ್ನ ಮೊದಲ ಧನ್ಯವಾದ ಎಂದು ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ದೆಹಲಿಯಿಂದ ವೀಡಿಯೋ ರಿಲೀಸ್ ಮಾಡಿರುವ ಶೋಭಾ ಕರಂದ್ಲಾಜೆ ಅವರು ನೀವು ನನ್ನನ್ನು ಎರಡು ಬಾರಿ ಆಯ್ಕೆ ಮಾಡಿ ಸಂಸದೆಯಾಗಿ ಮಾಡಿದ್ದೀರಿ. ಹೀಗಾಗಿ ನನ್ನನ್ನು ಗುರುತಿಸಿ ಪ್ರಧಾನಿಯವರು ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಕೊಟ್ಟಿದ್ದಾರೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ಮಂತ್ರಿಯಾಗಿದ್ದೇನೆ ಎಂದು ಎಲ್ಲಾ ಮತದಾರರಿಗೆ, ಕಾರ್ಯಕರ್ತರಿಗೆ, ಸಚಿವೆಯಾಗಿ ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಶೋಭಾ ಕರಂದ್ಲಾಜೆ ಅವರು ಧನ್ಯವಾದ ಸಲ್ಲಿಸಿದ್ದಾರೆ.