ಏರ್​ಪೋರ್ಟ್‌ನಲ್ಲಿ ಹೊತ್ತಿ ಉರಿದ ಪುಶ್‍ಬ್ಯಾಕ್ ವಾಹನ – ತಪ್ಪಿದ ಭಾರಿ ದುರಂತ…

59
firstsuddi

ಮುಂಬೈ : ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಪುಶ್ ಬ್ಯಾಕ್ ನೀಡುತ್ತಿದ್ದ ವಾಹನ ವಿಮಾನದ ಬಳಿಯೇ ಧಗ ಧಗ ಹೊತ್ತಿ ಉರಿದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು 10 ನಿಮಿಷದಲ್ಲಿ ಬೆಂಕಿ ನಂದಿಸಿ ಹತೋಟಿಗೆ ತಂದಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದೆ. ಏರ್ ಇಂಡಿಯಾ ವಿಮಾನವನ್ನು ಹಿಂದಕ್ಕೆ ತಳ್ಳಲು ಹೊರಟಿದ್ದು, ವಿಮಾನದ ಬಳಿ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಗಾಯ ಅಥವಾ ಪ್ರಾಣಹಾನಿ ಆಗಿಲ್ಲ. ಏರ್ ಇಂಡಿಯಾ ವಿಮಾನ ಮುಂಬೈನಿಂದ ಗುಜರಾತ್ ನ ಜಾಮ್ ನಗರಕ್ಕೆ ತೆರಳುತ್ತಿತ್ತು. ಇದರಲ್ಲಿ 85 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.