ಬೆಂಗಳೂರು: ವೋಲ್ವೋ ಕ್ಲಬ್ ಕ್ಲಾಸ್ 2.0 ಬಸ್ಗಳನ್ನು ರಸ್ತೆಗಿಳಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಬಸ್ಗಳ ಸಂಚಾರಕ್ಕೆ ಇಂದು ಚಾಲನೆ ನೀಡಿದರು. ಸಿಎಂ.ಸಿದ್ದರಾಮಯ್ಯ ಅವರು ನೂತನ ಐರಾವತ ಕ್ಲಬ್ ಬಸ್ಗಳಿಗೆ ವಿಧಾನಸೌಧದ ಮೆಟ್ಟಿಲುಗಳ ಎದುರು ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಆ ಮೂಲಕ ಐರಾವತ 2.0 ಮಾದರಿಯ 20 ಬಸ್ಗಳನ್ನು ಕೆಎಸ್ಆರ್ಟಿಸಿ ತನ್ನ ಸಮೂಹಕ್ಕೆ ಸೇರ್ಪಡೆಗೊಳಿಸಿದೆ. ಒಂದು ಬಸ್ನ ದರ 1.78 ಕೋಟಿ ರೂ.ಗಳಾಗಿದ್ದು, ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್ಗಳಿವೆ. ಅದಕ್ಕೆ ಇದೀಗ ಐರಾವತ 2.0 ಸೇರ್ಪಡೆಯಾಗಿವೆ. ನೋತನ ಬಸ್ಗೆ ಚಾಲನೆ ನೀಡಿದ ನಂತರ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಬಸ್ ಏರಿ ವೀಕ್ಷಣೆ ಮಾಡಿದರು. ಬಸ್ನ ಒಳಗೆ ಕುಳಿತು ವಾಹನದ ವಿಶೇಷತೆಗಳನ್ನು ಅವಲೋಕಿಸಿದರು. ಸಿಎಂಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದರು.
ವೋಲ್ವೋ ಕ್ಲಬ್ ಕ್ಲಾಸ್ 2.0 ಈ ಬಸ್ಗಳಲ್ಲಿ ಅನೇಕ ವಿಶೇಷತೆಗಳಿದ್ದು. ಶಕ್ತಿಶಾಲಿ ಹ್ಯಾಲೊಜೆನ್ ಹೆಡ್ಲೈಟ್ಗಳು, ಡೇ ರನ್ನಿಂಗ್ ಲೈಟ್, ಫ್ಲಶ್ ಇಂಟೀರಿಯರ್ಸ್, ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸವಿದೆ. ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನ ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ.










