ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಕೊಲೆ ಬೆದರಿಕೆ.

33

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಕರೆ ಮಾಡಿದ ವ್ಯಕ್ತಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಬಗ್ಗೆ ಮುಂಬೈ ಪೊಲೀಸರು ತಿಳಿಸಿದ್ದಾರೆ. ತಾನು ಕೇಳಿರುವ 2 ಕೋಟಿ ಹಣವನ್ನು ಕೊಡದೆ ಇದ್ದರೆ ಕೊಲ್ಲುವುದಾಗಿ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಸಂಬಂಧ ಮುಂಬೈ ಟ್ರಾಫಿಕ್ ಪೊಲೀಸರು ತಮ್ಮ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ಮತ್ತು ಜೀಶನ್ ಸಿದ್ದಿಕ್ ಅವರಿಗೆ ಜೀವ ಬೆದರಿಕೆ ಹಾಕಿದ್ದ 20 ವರ್ಷದ ಯುವಕನನ್ನು ಮುಂಬೈ ಪೊಲೀಸರು ಮಂಗಳವಾರ ನೋಯ್ಡಾದಲ್ಲಿ ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಶಂಕಿತ ಕರೆಗೂ ಮುನ್ನ ಸಿದ್ದಿಕ್ ಅವರ ಸಹಾಯವಾಣಿ ಸಂಖ್ಯೆಯ ಮೂಲಕ ಬೆದರಿಕೆ ಸಂದೇಶ ನೀಡಿದ್ದನು. ಸಿದ್ದಿಕ್ ಮತ್ತು ಖಾನ್ ಇಬ್ಬರಿಗೂ ತೊಂದರೆ ಕೊಡಲಿರುವ ತನ್ನ ಉದ್ದೇಶವನ್ನು ತಿಳಿಸಿದ್ದನು. ಈ ಘಟನೆ ನಡೆದ ಕೆಲವೆ ದಿನಗಳ ನಂತರ ಮತ್ತೆ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಾಗಿದೆ.