ಬೆಂಗಳೂರು : ನಿನ್ನೆ ಇಡೀ ಭಾರತದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗಿದ್ದು, ಸ್ಯಾಂಡಲ್‍ವುಡ್‍ನ ರಾಕಿಂಗ್ ದಂಪತಿಯ ಪುತ್ರಿ ಐರಾ ತನ್ನ ತಮ್ಮನಿಗೆ ಮೊದಲ ವರ್ಷದ ರಾಖಿ ಕಟ್ಟುತ್ತಿರುವ ಫೋಟೋಗಳನ್ನು ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಐರಾ ತನ್ನ ತಮ್ಮನಿಗೆ ಆರತಿ ಬೆಳಗಿ ರಾಖಿ ಕಟ್ಟುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಅದಕ್ಕೆ ಅವರ ಮೊದಲ ರಕ್ಷಾಬಂಧನ, ಒಡಹುಟ್ಟಿದವರ ಅಮೂಲ್ಯವಾದ ಬಂಧನಕ್ಕೆ ಬೆಲೆಕಟ್ಟಲು ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.










