ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರನ್ನು ಮದುವೆಯಾದ ವರ!

94
firstsuddi

ಹೈದರಾಬಾದ್ : ಒಂದೇ ಮಂಟಪದಲ್ಲಿ ಒಬ್ಬ ವರ ಇಬ್ಬರು ಯುವತಿಯರನ್ನು ವಿವಾಹವಾಗಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲಾ ಉಟ್ನೂರು ಮಂಡಲಂ ಮನ್ಸೂರ್ ನಲ್ಲಿ ನಡೆದಿದೆ.

ಒಂದೇ ಮಂಟಪದಲ್ಲಿ ಕನಕ ಉಶಾರಾಣಿ , ಅದಾ ಸುರೇಖಾ ಇಬ್ಬರು ಯುವತಿಯರನ್ನು ವರ ಅರ್ಜುನ್ ಮದುವೆಯಾಗಿದ್ದಾನೆ. ಸಂಬಂಧದಲ್ಲಿ ಭಾವನಾಗುತ್ತಿದ್ದ ವೇಲಾಡಿ ಅರ್ಜುನನನ್ನು ಮದುವೆಯಾಗಲು ಕನಕ ಉಶಾರಾಣಿ ಮತ್ತು ಅದಾ ಸುರೇಖಾ ಇಬ್ಬರೂ ಯುವತಿಯ ಪಟ್ಟು ಹಿಡಿದಿದ್ದರು. ಇದಕ್ಕೆ ಸಮಾಜ ಮತ್ತು ಅವರ ಹಿರಿಯರ ವಿರೋಧ ವ್ಯಕ್ತಪಡಿಸಿದರು. ಆದರೆ ಸಮಾಜದ ಹಿರಿಯರ ವಿರೋಧ ಲೆಕ್ಕಿಸದೇ ಯುವತಿಯರಿಬ್ಬರು ಒಂದೇ ಹುಡುಗನನ್ನು ಮದುವೆಯಾಗಿದ್ದಾರೆ. ವರ ಪದವೀಧರನಾಗಿದ್ದು, ಇಬ್ಬರೂ ವಧುಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆಶ್ಚರ್ಯವೆಂದ್ರೆ ಯುವತಿಯರಿಬ್ಬರೂ ಕಳೆದ 4 ವರ್ಷಗಳಿಂದ ಅರ್ಜುನನನ್ನು ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗಷ್ಟೇ ಕೋಲಾರದಲ್ಲಿಯೂ ಯುವಕನೊಬ್ಬ ಅಕ್ಕ-ತಂಗಿಯರನ್ನು ಮದುವೆಯಾಗಿದ್ದ ಪ್ರಕರಣವೊಂದು ಬೆಳಕಿಗೆ ಬಂದಿತ್ತು.