ಔರಂಗಾಬಾದ್​, ಒಸ್ಮಾನಾಬಾದ್‌ ನಗರಗಳ ಮರುನಾಮಕರಣ – ಮಹಾರಾಷ್ಟ್ರ ಸಂಪುಟ ಒಪ್ಪಿಗೆ…

72
firstsuddi

ಮುಂಬೈ : ಔರಂಗಾಬಾದ್​​ಗೆ ಸಂಭಾಜಿನಗರವೆಂದೂ, ಒಸ್ಮಾನಾಬಾದ್​​ ಗೆ ಧಾರಶಿವ್ ಎಂದು ಮರು ನಾಮಕರಣ ಮಾಡಲು ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಠಾಕ್ರೆ ನೇತೃತ್ವದ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರ ಕಾನೂನಾತ್ಮಕವಾಗಿರಲಿಲ್ಲ, ಇದೀಗ ನಮ್ಮ ಸರ್ಕಾರ ತೆಗೆದುಕೊಂಡಿರುವ ಮರುನಾಮಕರಣ ನಿರ್ಧಾರ ಕಾನೂನಾತ್ಮಕವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದಿರುವ ಶಿಂದೆ, ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಡಿ.ಬಿ ಪಾಟೀಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜೂನ್ 29ರಂದು ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಕೆಲವೇ ಗಂಟೆಗಳ ಮೊದಲು ಔರಂಗಾಬಾದ್‌ಗೆ ಛತ್ರಪತಿ ಸಂಭಾಜಿ ಹೆಸರನ್ನು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದರು.