ಚಿಕ್ಕಮಗಳೂರು : ಶಾರ್ಟ್ ಸಕ್ರ್ಯೂಟ್‍ನಿಂದ ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡು ದನಗಳು ಹಾಗೂ ಹುಲ್ಲಿನ ಬವಣೆ ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನಡೆದಿದೆ. ತಿಮ್ಮಪ್ಪ ಎಂಬುವರಿಗೆ ಸೇರಿದ ದನಗಳು ಹಾಗೂ ಹುಲ್ಲಿನ ಬವಣೆ ಎಂದು ತಿಳಿದು ಬಂದಿದ್ದು, ಗ್ರಾಮಸ್ಥರು ಅರ್ಧ ಸುಟ್ಟು ಮೂಕ ರೋಧನೆ ಅನುಭವಿಸುತ್ತಿರುವ ದನಗಳ ಪ್ರಾಣವನ್ನು ಉಳಿಸಿದ್ದಾರೆ. ಬೆಂಕಿ ಅವಘಡದಿಂದಾಗಿ 30ಸಾವಿರ ರೂ ಮೌಲ್ಯದ ಹುಲ್ಲಿನ ಬವಣೆ ನಾಶವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.










