ಶ್ರೀನಗರ : ಕರ್ತವ್ಯ ನಿರತ ಸೈನಿಕರಿಂದಲೇ ಉಗ್ರರು ಶಸ್ತ್ರಾಸ್ತ್ರಗಳನ್ನು ಕಸಿದು ಪರಾರಿಯಾಗಿರುವ ಘಟನೆ ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಸ್ಥಳೀಯ ಪಿಡಿಪಿ ಮುಖಂಡ ಶೇಖ್ ನಾಸಿರ್ ಅವರ ಬೆಂಬಲಿಗರ ಗುಂಪಿನಲ್ಲಿ ಸೇರಿಕೊಂಡಿದ್ದ ಉಗ್ರರು ಶೇಖ್ ನಾಸಿರ್ ಅವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೈನಿಕರ ಬಳಿ ಇದ್ದ ಕಸಿದು ಪರಾರಿಯಾಗಿದ್ದು, ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಸೇನಾ ಮೂಲಗಳ ಪ್ರಕಾರ ಸೈನಿಕರ ಬಳಿ ಇದ್ದ ಒಂದು ಎಕೆ 47 ಬಂದೂಕನ್ನು ಉಗ್ರರು ಕಸಿದು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಉಗ್ರರಿಗಾಗಿ ಸೇನೆ ತೀವ್ರ ಶೋಧಕಾರ್ಯ ನಡಸುತ್ತಿದ್ದು, ಸೈನಿಕರಿಗೆ ಸ್ಥಳೀಯ ಪೊಲೀಸರು ಕೂಡಾ ಸಾಥ್ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಈಗಾ ನಾಕಾಬಂದಿ ಹಾಕಲಾಗಿದೆ.










