ಕಳಸ : ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಭೇಟಿ…

264
firstsuddi

ಕಳಸ ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಗೌತಮ್ ಬಗಾದಿ,ಎಸ್‍ಪಿ ಹಕಾಯ್ ಅಕ್ಷಯ್ ಮಚ್ಚಿಂದ್ರ ಹಾಗೂ ಸಿಎಸ್ ಪೂವಿತ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಸೆಯಲ್ಲಿ ಮರ ಬಿದ್ದು ಹಾನಿಯಾದ ಉದಯ್ ಜೈನ್ ಅವರ ಮನೆಗೆ ನೀಡಿ ಪರಿಶೀಲನೆ ನಡೆಸಿದರು.ಕಳಸ-ಕುದುರೆಮುಖ ರಸ್ತೆಯ ಬಿಳುಗೋಡು ಎಂಬಲ್ಲಿ ರಸ್ತೆಗೆ ಜರಿದು ಬಿದ್ದ ಗುಡ್ಡವನ್ನು ಪರಿಶೀಲನೆ ನಡೆಸಿದರು.ಹಾನಿಯಾದ ಕೋಟೆ ಹೊಳೆ ಸೇತುವೆಯನ್ನು ವೀಕ್ಷಣೆ ನಡೆಸಿದರು.ಕೋಣೇಬೈಲಿನಲ್ಲಿ ಹಾನಿಗೀಡಾದ ಭತ್ತದ ಗದ್ದೆಯನ್ನು ಪರಿಶೀಲನೆ ನಡೆಸಿದರು. ಅಬ್ಬುಗುಡಿಗೆ-ಕಲ್ಲುಗೋಡು ಸಂಪರ್ಕ ಸೇತುವೆ ಕುಸಿದು ಬಿದ್ದ ಪ್ರದೇಶಕ್ಕೆ ಬೇಟಿ ನೀಡಿದರು.
ಹೊಸೂರು ರಸ್ತೆ,ಕೋಟೆ ಹೊಳೆ ಸೇತುವೆ ದುರಸ್ಥಿ ಬಗ್ಗೆ ಕಳೆದ ವರ್ಷ ಜನಸಂಪರ್ಕ ಸಭೆಯಲ್ಲಿ ಗಮನಸೆಳೆದಿದ್ದೇವೆ 15 ದಿನದಲ್ಲಿ ಕ್ರಮತೆಗೆದುಕೊಳ್ಳುತ್ತೇವೆ ಎಂದು ಹೇಳಿ ವರ್ಷವಾದರೂ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ಈ ಬಾರಿ ಮತ್ತಷ್ಟು ಹಾನಿಯಾಗಿದೆ ಎಂದು ಹೋಸೂರು ಬೋಜೆ ಗೌಡ,ಕಲ್ಕೋಡು ಕೆ.ಸಿ.ಧರಣೇಂದ್ರ ಜಿಲ್ಲಾಧಿಕಾರಿಯ ಗಮನಸೆಳೆದರು.
ನಾಳೆಯೇ ಬಂದು ಇದನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಇಂಜಿನೀಯರಿಗೆ ಸ್ಥಳದಲ್ಲಿ ತಿಳಿಸಿದರು. ಹಾನಿಯಾದ ಪ್ರದೇಶಗಳಿಗೆ ಕೂಡಲೇ ತುರ್ತು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮನೆ ಕಳೆದುಕೊಂಡವರಿಗೆ, ಜಮೀನು ಕಳೆದುಕೊಂಡವರಿಗೆ ಬೆಳೆ ಹಾನಿಯಾದವರಿಗೆ ಸರಕಾರದಿಂದ ನೀಡುಬ ಪರಿಹಾರವನ್ನು ಕೊಡಲಾಗುವುದು. ಈ ಬಗ್ಗೆ ಆಯಾಯ ಪ್ರದೇಶದ ಗ್ರಾಮ ಸಹಾಕರು ಕೂಡಲೇ ವರಧಿಯನ್ನು ನೀಡಬೇಕು ಎಂದು ಸೂಚಿಸಿದರು.
ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು, ಕಳಸ ಬಾಗದಲ್ಲಿ ಹಾನಿಯಾದ ಕೆಲ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.ತುತ್ತು ಆಗಬೇಕಾದ ಕೆಲಸಗಳನ್ನು ಕೂಡಲೇ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೆಳೆ ಹಾನಿ, ಮನೆ ಹಾನಿ, ಭೂಮಿ ಹಾನಿಯಾದ ಬಗ್ಗೆ ವರದಿಯನ್ನು ಪಡೆದುಕೊಂಡು ಸರಕಾರದಿಂದ ನೀಡುವ ಪರಿಹಾರವನ್ನು ಕೊಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ರಮೇಶ್ ತಾಲ್ಲೂ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್,ಕಂದಾಯ ನಿರೀಕ್ಷಕ ಅಜ್ಜೇ ಗೌಡ,ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್,ಪಿಡಿಒ ಕವೀಶ್,ಕೃಷಿ ಅಧಿಕಾರಿ ರೇಖಾ,ತೋಟಗಾರಿಕಾ ಅಧಿಕಾರಿ ಸಿ.ಚಂದ್ರಪ್ಪ ಇತರರು ಇದ್ದರು.