ಕಳಸ : ಯುವ ಕಲಾವಿದ ನಯನ ಆಚಾರ್ ಅವರಿಗೆ ಕಳಸ ಜೆಸಿಐ ಸಂಸ್ಥೆಯಿಂದ ಮಲೆನಾಡ ಕಲಾ ಸಿರಿ ಬಿರುದು…

163
firstsuddi

ಕಳಸ : ಕಳಸ ಜೆಸಿಐ ಸಂಸ್ಥೆಯಿಂದ ಯುವ ಕಲಾವಿದ ನಯನ ಆಚಾರ್ ಅವರಿಗೆ ಮಲೆನಾಡ ಕಲಾ ಸಿರಿ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಕಳಸ ಜೆಸಿಐ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಡೆದ ವಲಯ 14ರ ವಿವಿಧ ಘಟಕಗಳು ಮಾಡಿದ ಕಾರ್ಯಕ್ರಮಗಳಿಗೆ ಅನುಸಾರವಾಗಿ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಕಲಾವಿದನನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ವಲಯ 14ರ ವಲಯಾಧ್ಯಕ್ಷ ಸಮತಾ ಮಿಸ್ಕಿತ್ ಮಾತನಾಡಿ ಪ್ರತೀ ವರ್ಷ ನಡೆಯುವ ಜೆಸಿಐ ಮದ್ಯವಾರ್ಷಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೊರೋನದಿಂದ ಆ ಕಾರ್ಯಕ್ರವನ್ನು ಮಾಡಲಾಗಲಿಲ್ಲ. ಕೋರೋನದದಂತ ಕೆಟ್ಟ ಪರಿಸ್ಥಿತಿಯಲ್ಲೂ ಜೆಸಿಐಯ ಎಲ್ಲಾ ಘಟಕಗಳು ಉತ್ತಮ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಪೊಲೀಸರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರುಗಳಿಗೆ, ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಬಡಾ ಕುಟುಂಬಗಳಿಗೆ ಸಂಸ್ಥೆಯ ಘಟಕಗಳು ನೆರವನ್ನು ನೀಡಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ನವೀನ್ ಲಾಯ್ಡ್ ಮಿಸ್ಕಿತ್ ಮಾತನಾಡಿ ಇನ್ನೊಬ್ಬರ ಕಷ್ಟಕ್ಕೆ ಸಂಸ್ಥೆಯ ಘಟಕಗಳು ಸ್ಪಂದಿಸಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಆಪ್ ಗಳನ್ನು ಬಳಸಿಕೊಂಡು ತರಬೇತಿ ಕಾರ್ಯಕ್ರಮಗಳನ್ನು ಮಾಡಿ ರಾಷ್ಟ್ರ ಮಟ್ಟದಲ್ಲೂ ಗುರುತಿಸುವಂತೆ ವಲಯ 14 ಕೆಲಸವನ್ನು ಮಾಡಿ ತೋರಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ 14ರ ಘಟಕಗಳಿಗೆ ಪುರಸ್ಕಾರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ವಲಯ 14ರ ಉಪಾಧ್ಯಕ್ಷ ಪ್ರಸಾದ್, ಕಳಸ ಜೆಸಿಐ ಅಧ್ಯಕ್ಷ ಕೆ.ಸಿ.ಮಹೇಶ್, ಕಾರ್ಯದರ್ಶಿ ಅಶೋಕ್, ನಿಖಟಪೂರ್ವಧ್ಯಕ್ಷ ಪ್ರಕಾಶ್ ಕುಮಾರ್, ಸ್ಥಾಪಕ ಅಧ್ಯಕ್ಷ ಜಗದೀಶ್ ನಾಯ್ಕ್ , ಶ್ರೀ ಕಂಠ, ಪ್ರಶಾಂತ್, ಚರಣ್ ಇತರರು ಇದ್ದರು.