ಕಳಸ: ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ…

243
Firstsuddi kalsa

ಕಳಸ – ಕಲಶೇಶ್ವರ ಜಾತ್ರೆಯ ಸಂಭ್ರಮದ ಮದ್ಯೆ ಜಮ್ಮುವಿನ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಕಳಸ ವ್ಯಾಟ್ಸ್ ಆಪ್ ಗ್ರೂಪ್,ಕಳಸ ಜೆಸಿಐ,ಮಲ್ನಾಡ್ ಯೂತ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳಸ ಪೊಲೀಸ್ ಠಾಣೆಯ ಸಮೀಪ ಮಾನವ ಸರಪಳಿ ನಡೆಸಿ ಕ್ಯಾಂಡಲ್ ಹಿಡಿದುಕೊಂಡು ಎರಡು ನಿಮಿಷಗಳ ಮೌನಾಚರಣೆಯನ್ನು ಮಾಡಿದರು.ನಂತರ ಮಂಜಿನ ಕಟ್ಟೆಯ ತನಕ ಮೌನ ಮೆರವಣಿಗೆಯನ್ನು ಮಾಡಿ ದೇಶಕ್ಕಾಗಿ ಪ್ರಾಣ ತೆತ್ತ ಯೋದರಿಗಾಗಿ ಅಂತಿಮ ನಮನ ಸಲ್ಲಿಸಿದರು.
ಪಟ್ಟಣದಲ್ಲಿ ಜಾತ್ರೆಯ ಸಡಗರ ಸಂಬ್ರಮದ ಮದ್ಯೆ ಮೌನಾಚರಣೆ ಮಾಡುತ್ತಿರುವುದನ್ನು ಕಂಡ ನೂರಾರು ಮಹಿಳೆಯರು ಮಕ್ಕಳು ಸಾರ್ವಜನಿಕರು ಬಂದು ಅಂತಿಮ ನಮನದಲ್ಲಿ ಪಾಲ್ಗೊಂಡರು.