ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟೆಲ್ ನೀರಿಗೆ 3,000 ರೂ. ಒಂದು ಪ್ಲೇಟ್ ರೈಸ್ ಗೆ 7,500 ರೂ.

78
firstsuddi

ಕಾಬೂಲ್ : ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಾಗಿನಿಂದಲೂ ದೇಶದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಭಯೋತ್ಪಾದಕರ ಆಳ್ವಿಕೆಗೆ ಹೆದರಿ ದೇಶ ತೊರೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಮನೆ-ಮಠಗಳನ್ನು ತೊರೆದು, ಖಾಲಿ ಕೈಯ್ಯಲ್ಲಿ, ಉಟ್ಟ ಬಟ್ಟೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಒಂದು ನೀರಿನ ಬಾಟಲ್ ಖರೀದಿಸಬೇಕೆಂದರೆ 3,000 ರೂ. ಹಣ ನೀಡಬೇಕಿದೆ. ಒಂದು ಪ್ಲೇಟ್ ರೈಸ್ ಗೆ 7,500 ರೂ. ಖರ್ಚು ಮಾಡಬೇಕಿದೆ. ಅಷ್ಟೇ ಅಲ್ಲ, ಅಫ್ಘನ್ ಕರೆನ್ಸಿಯನ್ನೂ ಪಡೆಯುತ್ತಿಲ್ಲ. ಅಮೆರಿಕನ್ ಡಾಲರ್ ಗಳಲ್ಲೇ ಜನರು ಹಣ ಕಟ್ಟಬೇಕಾಗಿದೆ. ಇದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರ್ಥಿಕವಾಗಿ ಸಶಕ್ತರಾಗಿರುವವರು ಹಣ ನೀಡಿ ಖರೀದಿಸುತ್ತಿದ್ದಾರೆ. ಕೆಲವರು ಆಹಾರವಿಲ್ಲದೇ ಕುಳಿತಲ್ಲಿಯೇ ಕುಸಿದು ಬೀಳುತ್ತಿರುವ ಬಗ್ಗೆಯೂ ವರದಿಯಾಗಿವೆ.