ಕಾಳುಮೆಣಸು ಕಳವು : ಆರೋಪಿಗಳ ಬಂಧನ…

117
firstsuddi

ಕೊಟ್ಟಿಗೆಹಾರ : ಅಮ್ತಿ ಗ್ರಾಮದ ಆವಂತಿ ಎಸ್ಟೇಟ್‍ನಲ್ಲಿ 500 ಕೆ.ಜಿ ಹಸಿ ಕಾಳುಮೆಣಸು ಕಳವು ಮಾಡಿದ ಆರೋಪಿಗಳನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ.

ಆವಂತಿ ಎಸ್ಟೇಟ್‍ನ ತೋಟದಲ್ಲಿ 500 ಕೆಜಿ ಕಾಳುಮೆಣಸನ್ನು ಕಳವು ಮಾಡಿದ್ದು ಈ ಬಗ್ಗೆ ಬಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಾದ ಬಾಬ್ಲ್, ನಾಗರಾಜ್, ವಿನ್ಸಿ ಎಂಬುವವರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬಾಳೂರು ಪಿಎಸ್‍ಐ ರೇಣುಕಾ, ಸಿಬ್ಬಂದಿಗಳಾದ ಜಫರ್, ಮಹೇಶ್, ವೈಭವ್ ಮುಂತಾದವರು ಇದ್ದರು.