ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ.

29

ಕಾಶ್ಮೀರ: ಶ್ರೀನಗರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಗುಪ್ತಚರ ಮೂಲಗಳ ಮಾಹಿತಿ ಅನುಸಾರ ಈ ದಾಳಿ ನಡೆದಿದೆ. ದಚಿಗಮ್ ಅರಣ್ಯದ ಮೇಲ್ಭಾಗದ ಕಾರ್ಡನ್ ನಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಚಿಗಂ ರಾಷ್ಟ್ರೀಯ ಉದ್ಯಾನವನವಾಗಿದ್ದು, ನಗರದ ಹೊರವಲಯದಲ್ಲಿದೆ. ಸುಮಾರು 141 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಶೋಧ ಕಾರ್ಯಾಚರಣೆ ಮೇಲೆ ಭಯೋತ್ಪಾದಕರ ದಾಳಿಗೆ ಭದ್ರತಾ ಪಡೆ ಕೂಡಾ ಪ್ರತಿದಾಳಿ ನಡೆಸಿದೆ. ಪರಿಣಾಮ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದ್ದು, ಈ ಎನ್‍ಕೌಂಟರ್ ಸಾಗಿದೆ ಎಂದು ತಿಳಿದು ಬಂದಿದೆ.