ಕಿರುಕುಳ ಆರೋಪ-ತೆಲುಗು ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು…

212
firstsuddi

ಹೈದರಾಬಾದ್ : ತೆಲುಗು ಕಿರುತೆರೆ ನಟಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಸ್.ಆರ್. ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರ ನಗರದಲ್ಲಿ ನಡೆದಿದೆ. ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿ ಶ್ರಾವಣಿ ಅವರಿಗೆ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ದೇವರಾಜು ರೆಡ್ಡಿ ಎಂಬುವವರು ಪ್ರೀತಿಸುವ ನಾಟಕವಾಡಿ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಪೀಡಿಸಿತ್ತಿದ್ದರು. ಇದರಿಂದ ಬೇಸತ್ತ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಟಿಯ ಪೋಷಕರು ಆರೋಪಿಸಿದ್ದು, ಆರೋಪಿ ದೇವರಾಜು ರೆಡ್ಡಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.