ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟರ್ ವಾಹನ ಕಾಯ್ದೆ ಖಂಡಿಸಿ ಮೂಡಿಗೆರೆ ವಕೀಲರ ಪ್ರತಿಭಟನೆ…

611
firstsuddi

ಮೂಡಿಗೆರೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟರ್ ವಾಹನ ತಿದ್ದುಪಡಿ ಕಾಯ್ದೆ ಖಂಡಿಸಿ ಮೂಡಿಗೆರೆ ವಕೀಲರ ಸಂಘದ ವತಿಯಿಂದ ಇಂದು ಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ತಿದ್ದುಪಡಿಯಾಗಿರುವ ಕಾಯ್ದೆ ಸಾರ್ವಜನಿಕ ಹಿತಾಸಕ್ತಿಗೆ ಅನುವಾಗುವುದಿಲ್ಲ ಎಂದು ವಕೀಲರ ಸಂಘ ಖಂಡಿಸಿದ್ದು, ಕೇಂದ್ರ ಸರ್ಕಾರವು ಮೋಟರ್ ವಾಹನ ಕಾಯ್ದೆ 1988ನ್ನು ತಿದ್ದುಪಡಿ ಮಾಡಿರುವುದು ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು, ಈ ಕೂಡಲೇ ಈ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಗೋಪಾಲ್ ಗೌಡ, ಪ್ರಶಾಂತ್, ಜಗದೀಶ್, ಬಿ.ಟಿ. ನಟರಾಜ್, ಪ್ರಸನ್ನ ಕುಮಾರ್, ಡಿ.ಎಸ್. ಸುಧೀರ್, ದೇವರಾಜ್ ಹಾಗೂ ಇತರರು ಇದ್ದರು.