ಕೇರಳ ರಾಜ್ಯಪಾಲರಿಂದ ವರದಕ್ಷಿಣೆ ವಿರುದ್ಧ ಉಪವಾಸ ಸತ್ಯಾಗ್ರಹ…

94
firstsuddi

ತಿರುವನಂತಪುರ : ಕೇರಳ ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯರು ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡ ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ಸ್ವತಃ ವರದಕ್ಷಿಣೆ ಪಿಡುಗಿನ ವಿರುದ್ಧ ಇಂದು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಕೇರಳ ರಾಜಭವನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಮೂಲಕ ವರದಕ್ಷಿಣೆ ಎಂಬ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸಲು ರಾಜ್ಯಪಾಲರು ಮುಂದಾಗಿದ್ದು, ಇಂದು ಬೆಳಗ್ಗೆ 8 ಗಂಟೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ರಾಜ್ಯಪಾಲರು ಸಂಜೆ 6 ಗಂಟೆವರೆಗೆ ಉಪವಾಸ ಕೈಗೊಳ್ಳಲಿದ್ದಾರೆ.

ಮಹಿಳೆಯ ವಿರುದ್ಧದ ಕಿರುಕುಳಕ್ಕೆ ಅಂತ್ಯ ಹಾಡುವುದು ಮತ್ತು ಹಿಂಸೆ ವಿರುದ್ಧ ಜಾಗೃತಿ ಮೂಡಿಸುವುದು ರಾಜ್ಯಪಾಲರ ಉಪವಾಸ ಸತ್ಯಾಗ್ರಹದ ಪ್ರಮುಖ ಉದ್ದೇಶ ಎಂದು ರಾಜಭವನದ ಮೂಲಗಳಿಂದ ತಿಳಿದುಬಂದಿದೆ.