ಐದು ವರ್ಷದ ಬಾಲಕ ಮಠದ ಉತ್ತರಾಧಿಕಾರಿಯಾಗಿ ನೇಮಕ…

107
firstsuddi

ಕಲಬುರಗಿ : ಕಾಳಗಿ ಸಂಸ್ಥಾನ ಹಿರೇಮಠದ ಹಿಂದಿನ ಪೀಠಾಧಿಪತಿಗಳಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿಯವರು ಸೋಮವಾರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದರು. ಹೀಗಾಗಿ ಮಠದ ಪೀಠಾಧಿಪತಿಯ ಉತ್ತರಾಧಿಕಾರಿ ಸ್ಥಾನಕ್ಕೆ ಐದು ವರ್ಷದ ಬಾಲಕನನ್ನು ನೇಮಿಸಲಾಗಿದೆ.

ಶಿವಾಚಾರ್ಯರು ಲಿಂಗೈಕ್ಯರಾದ ಹಿನ್ನೆಲೆ ಅವರ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ ಅವರ ಪುತ್ರ ಐದು ವರ್ಷದ ನೀಲಕಂಠಯ್ಯಸ್ವಾಮಿ ಹಿರೇಮಠರನ್ನು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಲಾಯಿತು. ನಿನ್ನೆ ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತರಾಧಿಕಾರಿ ಪಟ್ಟದ ಪ್ರಕ್ರಿಯೆ ನಡೆದಿದ್ದು, ಮಠದ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲಾ. ಹೀಗಾಗಿ ಬಾಲಕನನ್ನು ಉತ್ತರಾಧಿಕಾರಿ ಮಾಡಿರುವುದಾಗಿ ಸ್ವಾಮೀಜಿಗಳು ತಿಳಿಸಿದ್ದಾರೆ.